alex Certify
ಕನ್ನಡ ದುನಿಯಾ       Mobile App
       

Kannada Duniya

‘ದೇವೇಗೌಡರ ಕುರಿತ ಜೀವನ ಚರಿತ್ರೆ ಪುಸ್ತಕ ನವೆಂಬರ್ ನಲ್ಲಿ ಬಿಡುಗಡೆ’

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರ ಕುರಿತ ಜೀವನ ಚರಿತ್ರೆ ಪುಸ್ತಕ ನವೆಂಬರ್ ತಿಂಗಳೊಳಗಾಗಿ ಬಿಡುಗಡೆಗೊಳ್ಳಲಿದೆ ಎಂದು ಕಡೂರು ಕ್ಷೇತ್ರ ಶಾಸಕ ಹಾಗೂ ಪುಸ್ತಕದ ಲೇಖಕ ವೈ.ಎಸ್.ವಿ. ದತ್ತಾ ಹೇಳಿದರು.

ಶಿವಮೊಗ್ಗ ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1973ರಿಂದಲೂ ಜನತಾ ಪರಿವಾರದಲ್ಲಿ ಹಾಗೂ ದೇವೇಗೌಡರ ಅನುಯಾಯಿಯಾಗಿ, ಬೆಂಬಲಿಗನಾಗಿ, ಒಡನಾಡಿಯಾಗಿ ರಾಜಕೀಯ ಜೀವನ ನಡೆಸುತ್ತಿದ್ದೇನೆ. ಇದೀಗ ಅವರ ಜೀವನ ಚರಿತ್ರೆ ಬರೆಯುತ್ತಿದ್ದು, ನವೆಂಬರ್ ವೇಳೆಗೆ ಪುಸ್ತಕ ಬಿಡುಗಡೆಗೊಳ್ಳಲಿದೆ ಎಂದರು.

ದೇವೇಗೌಡರ ರಾಜಕೀಯ ಜೀವನದಲ್ಲಿ ಎದುರಾದಂತಹ ಸಮಸ್ಯೆಗಳು, ರಾಜಕೀಯ ಹೋರಾಟ, ರೈತರ ಬಗೆಗಿನ ಕಾಳಜಿ, ಕೆಲವು ಸನ್ನಿವೇಶಗಳಲ್ಲಿ ಎದುರಿಸಿದಂತಹ ಘಟನೆಗಳು ಇನ್ನು ಮುಂತಾದ ವಿಷಯಗಳ ಸಮಗ್ರ ವಾಸ್ತವಿಕ ಸತ್ಯವನ್ನು ಈ ಜೀವನ ಚರಿತ್ರೆ ಒಳಗೊಂಡಿರುತ್ತದೆ ಎಂದರು.

ಲಿಂಗಾಯಿತ ಪ್ರತ್ಯೇಕ ಧರ್ಮ ವಿಚಾರ ಕುರಿತು ಇಂದು ಸಾಕಷ್ಟು ಚರ್ಚೆ ನಡೆಯುತ್ತಿದೆ. ದುರಾದೃಷ್ಟವೆಂದರೆ ಇದರಲ್ಲಿ ರಾಜಕಾರಣ ಸೇರಿಕೊಂಡಿದೆ. ಹೀಗಾಗಿಯೇ ವಿಷಯ ದಿನಕ್ಕೊಂದು ತಿರುವು ಪಡೆಯುತ್ತಿದೆ ಎಂದು ವೀರಶೈವ ಲಿಂಗಾಯಿತ ಪ್ರತ್ಯೇಕ ಧರ್ಮ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದರು.

ಇದು ಪ್ರತ್ಯೇಕ ಧರ್ಮವಾಗಬೇಕು. ಕೇವಲ ವೀರಶೈವರು ಮಾತ್ರ ಈ ಧರ್ಮದಲ್ಲಿ ಇರಬಾರದು, ಬಸವಣ್ಣನವರ ಅನುಯಾಯಿಗಳು ಹಾಗೂ ವಚನಕಾರರು ಎಲ್ಲರೂ ಸಹ ವೀರಶೈವ ಧರ್ಮಕ್ಕೆ ಒಳಪಡುತ್ತಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಸಹ ಈ ವಿಷಯವನ್ನು ಜನರ ಚರ್ಚೆಗೆ ಬಿಡಬೇಕಿತ್ತು. ಮೈಮೇಲೆ ಎಳೆದುಕೊಳ್ಳಬಾರದಿತ್ತು ಎಂದು ಮಾರ್ಮಿಕವಾಗಿ ನುಡಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...