alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ದರೋಡೆಗೆ ಯತ್ನ: ಸೈರನ್ ಶಬ್ಧ ಕೇಳಿ ಪರಾರಿಯಾದ ಕಳ್ಳರು

ಹಾವೇರಿ: ಬ್ಯಾಂಕ್ ಕಳ್ಳತನ ಮಾಡಲು ಬಂದ ಕಳ್ಳರ ಗುಂಪು ಸೈರನ್ ಶಬ್ಧ ಕೇಳಿ ಪರಾರಿಯಾಗಿರುವ ಘಟನೆ ಹಾವೇರಿಯ ಕರಗೂರು ಗ್ರಾಮದಲ್ಲಿ ನಡೆದಿದೆ.

ಭಾನುವಾರ ಬೆಳಿಗ್ಗೆ 2 ಗಂಟೆ ಸುಮಾರಿಗೆ ಇಲ್ಲಿನ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿಗೆ ನುಗ್ಗಿದ ಕಳ್ಳರು ಹಣ ಕಳವು ಮಾಡಲು ಯತ್ನಿಸಿದ್ದಾರೆ. ಷಟರ್‌ ಮತ್ತು ಬಾಗಿಲಿಗೆ ಹಾಕಿದ್ದ ಎರಡೂ ಬೀಗಗಳನ್ನು ಒಡೆದು ಒಳಗೆ ಪ್ರವೇಶಿಸಿದ್ದಾರೆ.

ನಂತರ ತಮ್ಮ ಗುರುತು ಮರೆಮಾಚಲು ಸಿಸಿ ಟಿವಿ ಕ್ಯಾಮೆರಾಗಳನ್ನು ಬೇರೆ ದಿಕ್ಕಿಗೆ ತಿರುಗಿಸಿ ಭದ್ರತಾ ಕೊಠಡಿಯ ಲಾಕರ್‌ನಲ್ಲಿದ್ದ ಹಣ ದೋಚಲು ಯತ್ನಿಸಿದ್ದಾರೆ.

ಈ ವೇಳೆ ಸೈರನ್‌ ಒಂದೇ ಸಮನೆ ಕೂಗಲು ಆರಂಭಿಸಿದೆ. ಸಿಕ್ಕಿ ಹಾಕಿಕೊಳ್ಳುವ ಭೀತಿಯಿಂದ ಕಳ್ಳರು ಎದ್ದುಬಿದ್ದು ಪರಾರಿಯಾಗಿದ್ದಾರೆ. ಸದ್ಯ ಲಾಕರ್‌ನಲ್ಲಿದ್ದ ಹಣ ಸುರಕ್ಷಿತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...