alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಗೆದ್ದಿದ್ದಕ್ಕೆ ಭಾರತ ವಿರೋಧಿ ಘೋಷಣೆ

haveri-arest-d

ಹಾವೇರಿ: ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯ ಫೈನಲ್ ನಲ್ಲಿ ಪಾಕ್ ಗೆದ್ದಿದ್ದಕ್ಕೆ ನಿನ್ನೆ ರಾತ್ರಿ ಸಂಭ್ರಮಾಚರಣೆ ನಡೆಸಿದ್ದ ಐವರನ್ನು ಹಾವೇರಿ ಜಿಲ್ಲೆ ರಾಣೆಬೆನ್ನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸದ್ದಾಂ, ರಿಯಾಜ್, ತಾಜುದ್ದೀನ್, ಮುಬಾರಕ್ ಹಾಗೂ ಆಸೀಫ್ ಬಂಧಿತರು. ಜೂನ್ 18 ರಂದು ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಪಂದ್ಯ ನಡೆದಿತ್ತು.

ಆರೋಪಿಗಳು ನಿನ್ನೆ ರಾತ್ರಿ ಪಾಕ್ ಗೆಲುವಿಗೆ ಸಂಭ್ರಮಾಚರಣೆ ನಡೆಸಿ ಭಾರತದ ವಿರುದ್ಧವಾಗಿ ಘೋಷಣೆ ಕೂಗಿದ್ದರೆನ್ನಲಾಗಿದೆ.

ದೇಶದ್ರೋಹಿ ಘೋಷಣೆ ಕೂಗಿದ ಆರೋಪದ ಮೇಲೆ ರಾಣೆಬೆನ್ನೂರು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಐವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...