alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿಸಿ ಮದುವೆಯಾದ್ರೂ ಬಿಟ್ಟು ಹೋದ ಪತಿ, ಕೈಕೊಟ್ಟ ಪ್ರಿಯತಮ

ಹಾವೇರಿ: ಪ್ರೀತಿಸಿ ಮದುವೆಯಾಗಿದ್ದ ಯುವತಿ, ಅತ್ತ ಗಂಡನೂ ಇಲ್ಲದೇ, ಇತ್ತ ಪ್ರಿಯತಮನೂ ಇಲ್ಲದೇ ಕಂಗಾಲಾಗಿದ್ದಾರೆ.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕು ಚಳಗೇರಿಯ ಯುವತಿ 4 ವರ್ಷಗಳ ಹಿಂದೆ ಹನುಮಂತ ಎಂಬುವವನನ್ನು ಪ್ರೀತಿಸಿ ಮದುವೆಯಾಗಿದ್ದು, ಆಕೆ ಗರ್ಭಿಣಿಯಾದ ಬಳಿಕ ಹನುಮಂತ ಪತ್ನಿಯನ್ನು ಬಿಟ್ಟು ಹೋಗಿದ್ದಾನೆ. ಯುವತಿಗೆ ಗಂಡು ಮಗುವಾಗಿದ್ದು, ತವರು ಮನೆಯನ್ನು ಸೇರಿಕೊಂಡಿದ್ದಾಳೆ.

ಅಲ್ಲಿಗೆ ಬಂದು ಹೋಗುತ್ತಿದ್ದ ಸಂಬಂಧಿಯಾಗಿದ್ದ ಸಂಜೀವ್ ಎಂಬಾತ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿದ್ದಾನೆ. ಮಗು ನೋಡಿಕೊಳ್ಳುತ್ತೇನೆ. ಮದುವೆಯಾಗುತ್ತೇನೆ ಎಂದು ಸಂಜೀವ್ ಹೇಳಿದ್ದರಿಂದ ಆತ ಹೇಳಿದಂತೆ ಯುವತಿ ಕೇಳಿದ್ದಾಳೆ.

ಇದರಿಂದ ಸಿಟ್ಟಾದ ಆಕೆಯ ತವರು ಮನೆಯವರು ಹೊರ ಹಾಕಿದ್ದಾರೆ. ಸಂಜೀವ್ ನನ್ನು ನಂಬಿ ಬಂದ ಯುವತಿಗೆ ಆತನೂ ಕೈಕೊಟ್ಟಿದ್ದು ಕಂಗಾಲಾಗಿದ್ದಾರೆ. ನೊಂದ ಯುವತಿ ರಾಣೆಬೆನ್ನೂರು ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...