alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಮಶಾನ ನಿರ್ಮಿಸಲು ಹೋದವರಿಗೆ ಕಾದಿತ್ತು ಅಚ್ಚರಿ

lingam-dd

ಹಾವೇರಿ: ಸ್ಮಶಾನ ನಿರ್ಮಿಸಲು ಹೋದ ಗ್ರಾಮಸ್ಥರಿಗೆ ಭಗವಂತನ ದರ್ಶನವಾದ ಅಚ್ಚರಿಯ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಬಾಳೇಹಳ್ಳಿಯಲ್ಲಿ ನಡೆದಿದೆ.

ಗ್ರಾಮದಲ್ಲಿ ಸ್ಮಶಾನವಿಲ್ಲದ ಕಾರಣ ಯಾರಾದರೂ ಮೃತಪಟ್ಟ ಸಂದರ್ಭದಲ್ಲಿ ಜಮೀನುಗಳಲ್ಲಿ, ಕೆರೆ ಅಂಗಳದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತದೆ.

ಗ್ರಾಮಸ್ಥರೆಲ್ಲ ಸೇರಿ ಕೆರೆಯ ಪಕ್ಕದ ಜಾಗದಲ್ಲಿ ಸ್ಮಶಾನ ನಿರ್ಮಿಸಲು ಮುಂದಾಗಿದ್ದಾರೆ. ಜೆ.ಸಿ.ಬಿ. ಬಳಸಿ ಜಾಗವನ್ನು ಸಮತಟ್ಟು ಮಾಡುವ ಸಂದರ್ಭದಲ್ಲಿ 5 -6 ಅಡಿ ಎತ್ತರದ ಬೃಹತ್ ಶಿವಲಿಂಗ ಕಂಡು ಬಂದಿದೆ.

ಪಕ್ಕದಲ್ಲಿಯೇ ಅಗೆದಾಗ ಗಣಪತಿ, ವೀರಭದ್ರ ಮೊದಲಾದ ದೇವರ ಮೂರ್ತಿಗಳು ಕಂಡು ಬಂದಿವೆ. ಸ್ಮಶಾನ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಿದ ಗ್ರಾಮಸ್ಥರು, ದೇವರ ಮೂರ್ತಿಗಳಿಗೆ ಪೂಜೆ ನೆರವೇರಿಸಿದ್ದಾರೆ.

ಸ್ಮಶಾನ ನಿರ್ಮಾಣ ಸ್ಥಳದಲ್ಲಿ ದೇವರ ಮೂರ್ತಿಗಳು ಕಂಡು ಬಂದ ವಿಚಾರ ಹರಡಿ ಸುತ್ತಮುತ್ತಲಿನ ಜನ ಕೂಡ ನೋಡಲು ಆಗಮಿಸಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...