alex Certify
ಕನ್ನಡ ದುನಿಯಾ       Mobile App
       

Kannada Duniya

ಬಲವಂತವಾಗಿ ಮುತ್ತಿಟ್ಟ ಯುವಕ, ನೊಂದ ಯುವತಿ ಸಾವಿಗೆ ಶರಣು

ಹಾವೇರಿ: ಯುವಕ ಬಲವಂತವಾಗಿ ಅಪ್ಪಿಕೊಂಡು ಮುತ್ತಿಟ್ಟ ಕಾರಣ, ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹನುಮಾಪುರ ತಾಂಡಾದಲ್ಲಿನ 19 ವರ್ಷದ ಯುವತಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮದ ಹೊರವಲಯದಲ್ಲಿರುವ ತನ್ನ ಮನೆಯಿಂದ ಯುವತಿ ಆಗಸ್ಟ್ 26 ರಂದು ಸಂಜೆ ಗಣಪತಿ ಉತ್ಸವವನ್ನು ನೋಡಲು ಹೋಗಿದ್ದಾಳೆ.

ಕತ್ತಲಾಗಿದ್ದರಿಂದ ಪರಿಚಯದ ಯುವಕನಿಗೆ ಮನೆವರೆಗೂ ಬಿಡಲು ಕರೆದಿದ್ದಾಳೆ. ಇದನ್ನು ಕೇಳಿಸಿಕೊಂಡ ಸಂತೋಷ್(25) ಅವರಿಬ್ಬರನ್ನು ಹಿಂಬಾಲಿಸಿ ಮನೆಯ ಸಮೀಪದಲ್ಲಿ ಹೋಗುತ್ತಿದ್ದ ಯುವತಿಯನ್ನು ಬಲವಂತವಾಗಿ ತಬ್ಬಿಕೊಂಡು ಮುತ್ತು ಕೊಟ್ಟಿದ್ದಾನೆ ಎನ್ನಲಾಗಿದೆ.

ಇದರಿಂದ ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಂತೋಷ್ ಪರಾರಿಯಾಗಿದ್ದಾನೆ. ಆರೋಪಿಯನ್ನು ಬಂಧಿಸಬೇಕೆಂದು ಯುವತಿಯ ಪೋಷಕರು, ಸಂಬಂಧಿಕರು ರಾಣೆಬೆನ್ನೂರು ಗ್ರಾಮಾಂತರ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯನ್ನೂ ತಡೆದಿದ್ದಾರೆ. ಪೊಲೀಸರು ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ, ಪ್ರತಿಭಟನಾಕಾರರ ಮನವೊಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...