alex Certify
ಕನ್ನಡ ದುನಿಯಾ       Mobile App
       

Kannada Duniya

ಆಕಳು –ಕರುವಿನ ಮಮತೆ ಕಂಡು ಮರುಗಿದ ಜನ

ಹಾವೇರಿ: ಅಮ್ಮನ ಪ್ರೀತಿಗೆ ಸಾಟಿ ಇಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಚಾರವೇ. ಪ್ರಾಣಿಗಳಲ್ಲಿಯೂ ತಾಯಿಯ ಮಮತೆ ಹೇಗಿರುತ್ತೆ ಎಂಬುದು ಮರಿ ಸಂಕಷ್ಟದಲ್ಲಿದ್ದಾಗ ವ್ಯಕ್ತವಾಗುತ್ತದೆ. ಅಂತಹುದೇ ಒಂದು ಘಟನೆ ಹಾವೇರಿಯಲ್ಲಿ ನಡೆದಿದೆ.

ಹಾವೇರಿಯ ಜೆ.ಪಿ. ನಗರ ಸರ್ಕಲ್ ನಲ್ಲಿ ಬೀಡಾಡಿ ಹಸು ಹಾಗೂ ಕರುವಿನ ಬಾಂಧವ್ಯವನ್ನು ಕಂಡು ಜನ ಮಮ್ಮಲ ಮರುಗಿದ್ದಾರೆ.

3 ದಿನಗಳ ಹಿಂದೆ ಕಾಲಿಗೆ ಗಾಯವಾಗಿ ನಿತ್ರಾಣಗೊಂಡು ಬಿದ್ದಿದ್ದ ಕರುವನ್ನು ಸ್ಥಳೀಯರು ಲಗೇಜ್ ಆಟೋದಲ್ಲಿ ಪಶು ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲೇ ಇದ್ದ ಆಕಳು ‘ಅಂಬಾ’ ಎನ್ನುತ್ತಾ ವಾಹನವನ್ನು ಹಿಂಬಾಲಿಸಿದೆ.

ದೂರದವರೆಗೂ ಕರುವನ್ನು ನೋಡುತ್ತಾ ವಾಹನ ಹಿಂಬಾಲಿಸಿಕೊಂಡು ಪಶು ಆಸ್ಪತ್ರೆಗೆ ಬಂದಿದೆ. ಕರುವಿಗೆ ಪಶು ವೈದ್ಯರು ಚಿಕಿತ್ಸೆ ನೀಡುವಾಗಲೂ ಆಸ್ಪತ್ರೆಯ ಎದುರಲ್ಲೇ ಕಾದಿದೆ. ಚಿಕಿತ್ಸೆ ಬಳಿಕ ಕರು ಚೇತರಿಸಿಕೊಳ್ಳುತ್ತಿದೆ.

ಕರುವಿನೊಂದಿಗಿನ ಆಕಳ ಮಮಕಾರವನ್ನು ಕಂಡು ಜನ ಅಚ್ಚರಿಯಾಗಿದ್ದು, ಅದರ ಕಾಳಜಿಗೆ ಮರುಗಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...