alex Certify
ಕನ್ನಡ ದುನಿಯಾ       Mobile App
       

Kannada Duniya

ಅನೈತಿಕ ಸಂಬಂಧದ ಕಾರಣಕ್ಕೆ ನಡೆದಿತ್ತಲ್ಲಿ ಕೊಲೆ

murde-haveri

ಹಾವೇರಿ: ರಾಣೆಬೆನ್ನೂರು ಬಸ್ ಡಿಪೋದಲ್ಲಿ ಜನವರಿಯಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ಬಯಲಿಗೆಳೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಡಿಪೋದಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ಲಿಂಗರಾಜ ಕೊಲೆ ಆರೋಪಿ. ಅಂದು ಸುಟ್ಟು ಕರಕಲಾಗಿದ್ದ ಶವ ಈತನದೇ ಎಂದು ಭಾವಿಸಲಾಗಿತ್ತು. ಆದರೆ, ಅಂದು ಸತ್ತಿದ್ದು, ಈತನ ಚಿಕ್ಕಪ್ಪ ಚನ್ನಪ್ಪ(40) ಎಂಬುದು ಗೊತ್ತಾಗಿದೆ.

ಡಿಪೋದಲ್ಲಿದ್ದ ಬಸ್ ಗೆ ಬೆಂಕಿ ಬಿದ್ದು, ಅದರಲ್ಲಿ ಸುಟ್ಟಿದ್ದ ಶವ ಪತ್ತೆಯಾಗಿತ್ತು. ಲಿಂಗರಾಜನೇ ಮೃತಪಟ್ಟಿರುವುದಾಗಿ ಹೇಳಲಾಗಿತ್ತು. ಆತನ ಕುಟುಂಬಕ್ಕೆ ಪರಿಹಾರವನ್ನೂ ನೀಡಲಾಗಿತ್ತು.

ಲಿಂಗರಾಜನ ಸಂಬಂಧಿಯೊಂದಿಗೆ ಅವಿವಾಹಿತನಾಗಿದ್ದ ಆತನ ಚಿಕ್ಕಪ್ಪ ಚನ್ನಪ್ಪ ಅನೈತಿಕ ಸಂಬಂಧ ಹೊಂದಿದ್ದನಲ್ಲದೇ ಈತನ ಪತ್ನಿಯ ಮೇಲೆಯೂ ಕಣ್ಣು ಹಾಕಿದ್ದ ಎನ್ನಲಾಗಿದೆ.

ಜನವರಿ 1 ರಂದು ಚಿಕ್ಕಪ್ಪನಿಗೆ ವಿಪರೀತ ಮದ್ಯ ಕುಡಿಸಿ, ಬಸ್ ಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಲಿಂಗರಾಜ ಅಲ್ಲಿಂದ ಪರಾರಿಯಾಗಿದ್ದಾನೆ.

ಇಷ್ಟು ದಿನಗಳ ಕಾಲ ಗೋವಾ, ಮುಂಬೈನಲ್ಲಿ ಅಲೆದಾಡಿ, ಮನೆಗೆ ಮರಳಿದ್ದಾನೆ. ಸತ್ತಿದ್ದಾನೆ ಎಂದು ಹೇಳಲಾಗಿದ್ದ ವ್ಯಕ್ತಿ ಮರಳಿ ಬಂದಿದ್ದರಿಂದ ಪೊಲೀಸರು ಆತನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

ಆಗ ಕೊಲೆಯ ರಹಸ್ಯ ಬಯಲಾಗಿದೆ. ಲಿಂಗರಾಜನ ವಿರುದ್ಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ಪರಶುರಾಮ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...