alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಕ್ಕಿಬಿದ್ದ ಪತಿಗೆ ಹಿಗ್ಗಾಮುಗ್ಗಾ ಥಳಿಸಿದ ಪತ್ನಿ

ಹಾಸನ: ಸ್ನೇಹಿತನ ಪತ್ನಿಯೊಂದಿಗೆ ಪರಾರಿಯಾಗಿದ್ದ ಪತಿಗೆ ಪತ್ನಿ ಕಬ್ಬಿಣದ ರಾಡ್ ನಿಂದ ಥಳಿಸಿದ ಘಟನೆ ಹಾಸನ ಜಿಲ್ಲೆಯ ಗಂಡಸಿ ಹ್ಯಾಂಡ್ ಪೋಸ್ಟ್ ನಲ್ಲಿ ನಡೆದಿದೆ.

ಹಾರ್ಡ್ ವೇರ್ ಅಂಗಡಿಯನ್ನು ಹೊಂದಿರುವ ವ್ಯಕ್ತಿ ತನ್ನ ಮನೆಯ ಸಮೀಪದಲ್ಲೇ ಇದ್ದ ಸ್ನೇಹಿತನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ಪತ್ನಿಯನ್ನು ಬಿಟ್ಟು, ಸ್ನೇಹಿತನ ಪತ್ನಿ ಮತ್ತು ಮಕ್ಕಳನ್ನು ಕರೆದುಕೊಂಡು ಮೈಸೂರಿನಲ್ಲಿ ನೆಲೆಸಿದ್ದಾನೆ.

ಸ್ನೇಹಿತ ಮೈಸೂರಲ್ಲಿ ಪತ್ನಿ ಇರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 2 ದಿನಗಳ ಹಿಂದೆ ಅಂಗಡಿಗೆ ವಾಪಸ್ ಆಗಿದ್ದ ಹಾರ್ಡ್ ವೇರ್ ಮಾಲೀಕನನ್ನು ಕಂಡ ಆತನ ಪತ್ನಿ ಅಲ್ಲಿಗೇ ಆಗಮಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಸ್ನೇಹಿತನ ಪತ್ನಿ, ಮಕ್ಕಳನ್ನು ನಾನು ಕರೆದುಕೊಂಡು ಹೋಗಿಲ್ಲ. ಅವರು ತನ್ನ ಗಂಡ ಬೇಡವೆಂದು ಬರೆದುಕೊಟ್ಟು ಹೋಗಿದ್ದಾರೆ. ಅವರಿಗೂ ನನಗೂ ಸಂಬಂಧವಿಲ್ಲ. ನಾನು ನನ್ನ ಪತ್ನಿಯಿಂದ ದೂರವಾಗಿದ್ದೇನೆ ಎಂದು ಹಾರ್ಡ್ ವೇರ್ ಮಾಲೀಕ ಹೇಳಿದ್ದಾರೆ.

ಆದರೆ, ಇದನ್ನು ಒಪ್ಪದ ಸ್ನೇಹಿತ, ಹಾರ್ಡ್ ವೇರ್ ಮಾಲೀಕನೇ ತನ್ನ ಪತ್ನಿ, ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದ್ದಾರೆ.

ಹಾರ್ಡ್ ವೇರ್ ಮಾಲೀಕನ ಪತ್ನಿ ಕೂಡ ಹೀಗೆಯೇ ಹೇಳಿದ್ದು, ಗಂಡನನ್ನು ಥಳಿಸಿದ್ದಾರೆ. ಪೊಲೀಸರು ದಂಪತಿಯನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...