alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಸನ ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಹಾಸನ: ಶನಿವಾರ ಹಾಸನದ ಮಣಚನಹಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ಅಪಹರಣ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ವಿದ್ಯಾರ್ಥಿನಿಯನ್ನು ಅಪಹರಿಸಿರಲಿಲ್ಲ, ಬದಲಿಗೆ ಆಕೆಯೇ ಪ್ರಿಯಕರನೊಂದಿಗೆ ತೆರಳಿ ಮದುವೆಯಾಗಿ ವಾಪಸ್ ಆಗಿದ್ದಾಳೆ.

ಹಾಸನದ ಕಾಲೇಜಿನಲ್ಲಿ 2 ನೇ ವರ್ಷದ ಬಿಕಾಂ ಓದುತ್ತಿರುವ ವಿದ್ಯಾರ್ಥಿನಿ ಅದೇ ಗ್ರಾಮದ ಯುವಕನನ್ನು ಪ್ರೀತಿಸಿದ್ದು, ಮದುವೆಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿದೆ. ಇದೇ ಕಾರಣಕ್ಕೆ ಯುವಕ ಅಪಹರಣದ ಮೂಲಕ ವಿದ್ಯಾರ್ಥಿನಿಯನ್ನು ಕರೆದೊಯ್ದು ಮದುವೆಯಾಗಿದ್ದಾನೆ.

ಶನಿವಾರ ಸಂಜೆ ವಿದ್ಯಾರ್ಥಿನಿ ತನ್ನ ಭಾವನೊಂದಿಗೆ ಬೈಕ್ ನಲ್ಲಿ ತೆರಳುವಾಗ, ಇನ್ನೋವಾದಲ್ಲಿ ಆಗಮಿಸಿದ್ದವರು ಅಪಹರಣ ಮಾಡಿದ್ದರು. ಪೊಲೀಸರು ಅಪಹರಣ ಪ್ರಕರಣ ದಾಖಲಿಸಿಕೊಂಡು ಪತ್ತೆಗೆ ಕ್ರಮ ಕೈಗೊಂಡಿದ್ದರು. ವಿದ್ಯಾರ್ಥಿನಿ ಹಾಗೂ ಯುವಕ 3 ವರ್ಷಗಳಿಂದ ಪ್ರೀತಿಸಿದ್ದು, ಧರ್ಮಸ್ಥಳದಲ್ಲಿ ಮದುವೆಯಾಗಿ ವಾಪಸ್ ಆಗಿದ್ದಾರೆ. ಮನೆಯವರ ವಿರೋಧವಿದ್ದ ಕಾರಣ ಅಪಹರಣದ ನಾಟಕ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...