alex Certify
ಕನ್ನಡ ದುನಿಯಾ       Mobile App
       

Kannada Duniya

ಲವ್, ಸೆಕ್ಸ್, ದೋಖಾ –ಬಾಯ್ ಫ್ರೆಂಡ್ ಮದುವೇಲಿ ಯುವತಿ ಧರಣಿ

ಹಾಸನ: ಬಾಯ್ ಫ್ರೆಂಡ್ ಮದುವೆಯಲ್ಲಿ ಯುವತಿ ಧರಣಿ ನಡೆಸಿದ್ದಾರೆ. ಹಾಸನದ ಕಲ್ಯಾಣ ಮಂಟಪದಲ್ಲಿ ಇಂದು ಮದುವೆ ನಡೆಯುವಾಗ ಆಗಮಿಸಿದ ಯುವತಿ ಮದುಮಗ ಮೋಸ ಮಾಡಿರುವುದಾಗಿ ಆರೋಪಿಸಿದ್ದಾರೆ.

ಮದುವೆಯಾಗುವುದಾಗಿ ನಂಬಿಸಿ ಬೆಂಗಳೂರು ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ ಯುವಕ, ಆಕೆಗೆ ಕೈಕೊಟ್ಟು ಬೇರೆ ಮದುವೆಯಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಸರ್ಕಾರಿ ಕೆಲಸದಲ್ಲಿರುವ ಯುವಕ, 4 ವರ್ಷಗಳಿಂದ ಪ್ರೀತಿಸಿದ್ದು, ಎಲ್ಲಾ ಕಡೆ ಜೊತೆಯಾಗಿ ಸುತ್ತಾಡಿದ್ದಾರೆ. ಮದುವೆ ಹೆಸರಲ್ಲಿ ಆತ ಯುವತಿಯೊಂದಿಗೆ ಸಂಬಂಧ ಬೆಳೆಸಿ ಕೈಕೊಟ್ಟಿದ್ದು, ಇಂದು ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದಾನೆ.

ಯುವತಿ ಮಂಟಪಕ್ಕೆ ಬಂದು ಗಲಾಟೆ ಮಾಡಲು ಮುಂದಾಗಿದ್ದನ್ನು ಮೊದಲೇ ತಿಳಿದ ಯುವಕನ ಸಂಬಂಧಿಕರು ಮುಹೂರ್ತ ನಿಗದಿಯಾಗಿದ್ದ ಸಮಯಕ್ಕಿಂತ ಮೊದಲೇ ತಾಳಿ ಕಟ್ಟಿಸಿದ್ದಾರೆ. ಮದುವೆ ಮನೆ ಬಳಿ ಯುವತಿ ಗಲಾಟೆ ನಡೆಸಿದ್ದರಿಂದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಯುವತಿಯಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...