alex Certify
ಕನ್ನಡ ದುನಿಯಾ       Mobile App
       

Kannada Duniya

ತನಗಿಂತ ಹಿರಿಯಳನ್ನು ಪ್ರೀತಿಸಿದ ಯುವಕನಿಂದ ಹೇಯಕೃತ್ಯ

ಹಾಸನ: ಕತ್ತು ಹಿಸುಕಿ ಪ್ರಿಯತಮೆಯನ್ನೇ ಕೊಲೆ ಮಾಡಿದ್ದ ಪ್ರಿಯಕರನನ್ನು, ಹಾಸನ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪುರ ಗ್ರಾಮದ ಪ್ರವೀಣ್(23) ಬಂಧಿತ ಆರೋಪಿ. ಬೇಲೂರು ತಾಲ್ಲೂಕು ಹಗರೆ ನಿವಾಸಿ ಯುವತಿಯನ್ನು ಪ್ರವೀಣ್ ಪ್ರೀತಿಸಿದ್ದಾನೆ. 4 ವರ್ಷಗಳಿಂದ ಪ್ರೀತಿಸಿದ್ದ ಯುವತಿ ತನಗಿಂತ 2 ವರ್ಷ ದೊಡ್ಡವಳೆಂದು ತಿಳಿದ ಬಳಿಕ ಮದುವೆಯಾಗಲು ನಿರಾಕರಿಸಿದ್ದಾನೆ.

ಯುವತಿ ಪಟ್ಟು ಬಿಡದ ಕಾರಣ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರವೀಣ್ ಮಾರ್ಚ್ 22 ರಂದು ಹುಟ್ಟುಹಬ್ಬಕ್ಕೆ ವಿಶ್ ಮಾಡಲು ಬಂದಿದ್ದ ಪ್ರಿಯತಮೆಯನ್ನು ಕೊಲೆ ಮಾಡಿ, ಬೈಕ್ ನಲ್ಲಿ 24 ಕಿಲೋ ಮೀಟರ್ ದೂರಕ್ಕೆ ಮೃತದೇಹ ಕೊಂಡೊಯ್ದು ಎಸೆದಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...