alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಳಿಂಗ ಸರ್ಪ ಕಂಡು ಬೆಚ್ಚಿ ಬಿದ್ದ ಕಾಫಿತೋಟ ಕಾರ್ಮಿಕರು

havu

ಹಾಸನ: ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಕ್ಯಾನಹಳ್ಳಿ ಗ್ರಾಮದ ಕಾಫಿ ತೋಟದಲ್ಲಿ ಕೆರೆ ಹಾವು ನುಂಗಿದ್ದ ಕಾಳಿಂಗ ಸರ್ಪ ಕಂಡು ಬಂದಿದೆ.

ಸುದೀರ್ ಅವರ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಕಾಳಿಂಗ ಸರ್ಪ ಕಂಡಿದೆ. ಹಾವು ಹಿಡಿಯುವ ಸಗೀರ್ ಅವರಿಗೆ ಮಾಹಿತಿ ನೀಡಲಾಗಿದ್ದು, ಕೆಲ ಸಮಯದಲ್ಲಿಯೇ ಸ್ಥಳಕ್ಕೆ ಬಂದ ಸಗೀರ್ ಹಾವು ಹಿಡಿಯಲು ಮುಂದಾಗಿದ್ದಾರೆ.

ಕಾಳಿಂಗ ಸರ್ಪ ಕೆರೆಹಾವನ್ನು ನುಂಗುತ್ತಿರುವುದನ್ನು ಗಮನಿಸಿದ ಅವರು ಸುರಕ್ಷಿತವಾಗಿ ಹಿಡಿದಿದ್ದಾರೆ. ನುಂಗಿದ್ದ ಹಾವನ್ನು ಕಾಳಿಂಗ ಸರ್ಪ ಉಗುಳಿದ್ದು, ಅದನ್ನು ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸುರಕ್ಷಿತವಾಗಿ ಕೆಂಪುಹೊಳೆ ಅರಣ್ಯಕ್ಕೆ ಬಿಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...