alex Certify
ಕನ್ನಡ ದುನಿಯಾ       Mobile App
       

Kannada Duniya

ಲೇಡಿಸ್ ಹಾಸ್ಟೆಲ್ ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಈ ದೃಶ್ಯ

ಹಾಸನ: ಹಾಸನದ ಪಶು ವೈದ್ಯಕೀಯ ಮಹಾವಿದ್ಯಾಲಯದ ಮಹಿಳಾ ಹಾಸ್ಟೆಲ್ ಗೆ ಅಪರಿಚಿತ ವ್ಯಕ್ತಿಯೊಬ್ಬ ನುಗ್ಗಿ ಓಡಾಟ ನಡೆಸಿದ್ದಾನೆ.

ಡಿಸೆಂಬರ್ 2 ರಂದು ರಾತ್ರಿ ಅಪರಿಚಿತ ವ್ಯಕ್ತಿ ಹಾಸ್ಟೆಲ್ ಆವರಣ ಪ್ರವೇಶಿಸಿ ಪೈಪ್ ಮೂಲಕ ಮೇಲೆ ಬಂದಿದ್ದು, ವಿದ್ಯಾರ್ಥಿನಿಯರ ಕೊಠಡಿ ಮೊದಲಾದ ಕಡೆಗಳಲ್ಲಿ ಓಡಾಟ ನಡೆಸಿದ್ದಾನೆ. ಈ ದೃಶ್ಯಗಳೆಲ್ಲಾ ಹಾಸ್ಟೆಲ್ ನಲ್ಲಿ ಅಳವಡಿಸಿರುವ ಸಿ.ಸಿ. ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಕಳೆದ ಮಾರ್ಚ್ ನಲ್ಲಿಯೂ ಯುವಕನೊಬ್ಬ ಹಾಸ್ಟೆಲ್ ಗೆ ನುಗ್ಗಿದ್ದು, ವಿದ್ಯಾರ್ಥಿನಿಯರಲ್ಲಿ ಆತಂಕ ಮೂಡಿಸಿತ್ತು. ಬಡಾವಣೆ ಠಾಣೆಗೆ ದೂರು ನೀಡಲಾಗಿತ್ತು.

ಮತ್ತೆ ಇದೇ ರೀತಿಯ ಘಟನೆ ಮರುಕಳಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಕಾಲೇಜಿನ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಾಸ್ಟೆಲ್ ಗೆ ನುಗ್ಗಿದ್ದ ವ್ಯಕ್ತಿಯ ಶೋಧ ಕಾರ್ಯ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...