alex Certify
ಕನ್ನಡ ದುನಿಯಾ       Mobile App
       

Kannada Duniya

ನರ್ಸ್ ಕೈಯಿಂದ ಬಿದ್ದು ನವಜಾತ ಶಿಶು ಸಾವು

baby-dd

ಹಾಸನ: ನರ್ಸ್ ಕೈಯಿಂದ ಜಾರಿ ಬಿದ್ದ ನವಜಾತ ಶಿಶು ಮೃತಪಟ್ಟ ದಾರುಣ ಘಟನೆ ಹಾಸನದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಕಡುವಿನಹೊಸಹಳ್ಳಿಯ ಮಹಿಳೆಗೆ 4 ದಿನದ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು.

ಚಿಕಿತ್ಸೆಗೆಂದು ಶಿಶುವನ್ನು ತೆಗೆದುಕೊಂಡು ಹೊರಟ ಸಂದರ್ಭದಲ್ಲಿ ನರ್ಸ್ ಕೈಯಲ್ಲಿದ್ದ ಮಗು ಜಾರಿ ಬಿದ್ದಿದೆ. ಮಗು ಸಾವನ್ನಪ್ಪಿದ್ದು, ಗೊತ್ತಾಗಿ ನರ್ಸ್ ಪರಾರಿಯಾಗಿದ್ದಾಳೆ.

ಮೃತ ಮಗುವಿನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ಮಗು ಮೃತಪಟ್ಟಿದೆ ಎಂದು ದೂರಿದ್ದಾರೆ.

ಆಸ್ಪತ್ರೆಯಲ್ಲಿ ಬಿಗುವಿನ ವಾತಾವರಣ ಉಂಟಾಗಿ ಸ್ಥಳೀಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Jobs by neuvoo.co.in

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...