alex Certify
ಕನ್ನಡ ದುನಿಯಾ       Mobile App
       

Kannada Duniya

ವರನಿಗೆ ಬಿಗ್ ಶಾಕ್ ಕೊಟ್ಲು ವಧು

ಹಾಸನ: ಮದುವೆ ಮಂಟಪದಿಂದ ವಧು ಪರಾರಿಯಾದ ಘಟನೆ ತುಮಕೂರು ಜಿಲ್ಲೆಯಲ್ಲಿ ಇತ್ತೀಚೆಗಷ್ಟೇ ನಡೆದಿತ್ತು. ಅಂತಹುದೇ ಮತ್ತೊಂದು ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನಲ್ಲಿ ನಡೆದಿದ್ದು, ಇಂದು ನಡೆಯಬೇಕಿದ್ದ ಮದುವೆ ಕ್ಯಾನ್ಸಲ್ ಆಗಿದೆ.

ನಿನ್ನೆ ರಾತ್ರಿ ಮದುವೆ ಶಾಸ್ತ್ರಗಳಲ್ಲಿ ಉತ್ಸಾಹದಿಂದಲೇ ಪಾಲ್ಗೊಂಡಿದ್ದ ವಧು ರಾತ್ರಿ ಮಂಟಪದಿಂದ ಪರಾರಿಯಾಗಿದ್ದಾಳೆ. ಆಕೆ ವರನಿಗೆ ವಾಟ್ಸಾಪ್ ನಲ್ಲಿ ಫೋಟೋ, ಸಂದೇಶ ಕಳಿಸಿ ತಾನು ಈಗಾಗಲೇ ಮದುವೆಯಾಗಿರುವುದಾಗಿ ತಿಳಿಸಿದ್ದಾಳೆ.

ಬೆಂಗಳೂರು ಮೂಲದ ಇಂಜಿನಿಯರ್ ಜೊತೆಗೆ 4 ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿ, ನವೆಂಬರ್ 11 ರಂದು ಇಂದೋರ್ ಮೂಲದ ಯುವಕನೊಂದಿಗೆ ಮದುವೆ ಮಾಡಿಕೊಂಡಿದ್ದಾಳೆ. ತನ್ನ ಮದುವೆ ಸರ್ಟಿಫಿಕೇಟ್ ಮತ್ತು ಫೋಟೋಗಳನ್ನು ಇಂದು ಮದುವೆಯಾಗಬೇಕಿದ್ದ ವರನಿಗೆ ವಾಟ್ಸಾಪ್ ನಲ್ಲಿ ಕಳಿಸಿದ್ದಾಳೆ.

ನಿನ್ನೆ ಮದುವೆ ಕಾರ್ಯದಲ್ಲಿ ಭಾಗಿಯಾಗಿದ್ದ ವಧು ನಾಪತ್ತೆಯಾಗಿದ್ದರಿಂದ ಹುಡುಕಾಟ ನಡೆಸಲಾಗಿದೆ. ಆದರೆ, ವರನಿಗೆ ಆಕೆಯ ಮದುವೆ ಫೋಟೋ ಬಂದ ಬಳಿಕ ಮದುವೆಯನ್ನು ನಿಲ್ಲಿಸಲಾಗಿದೆ. ಯುವತಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...