alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಸನಾಂಬೆ ದೇಗುಲದಲ್ಲಿ ಸಂಗ್ರಹವಾಯ್ತು ದಾಖಲೆಯ ಕಾಣಿಕೆ

hasan

ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆ ದೇಗುಲದಲ್ಲಿ ದಾಖಲೆ ಮೊತ್ತದ ಕಾಣಿಕೆ ಸಂಗ್ರಹವಾಗಿದೆ. ಕಳೆದ ಬಾರಿಗಿಂತ 2 ಪಟ್ಟು ಹೆಚ್ಚು ಮೊತ್ತದ ಕಾಣಿಕೆ ಸಲ್ಲಿಕೆಯಾಗಿದೆ.

ಹಾಸನದ ಹಾಸನಾಂಬೆ ದೇವಿ ವರ್ಷಕ್ಕೊಮ್ಮೆ ದರ್ಶನ ನೀಡಲಿದ್ದು, ಈ ಬಾರಿ 13 ದಿನಗಳ ಕಾಲ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದುಕೊಂಡಿದ್ದಾರೆ. ದೇವಿಗೆ ಈ ಬಾರಿ 2.65 ಕೋಟಿ ರೂಪಾಯಿ ಕಾಣಿಕೆ ಸಲ್ಲಿಕೆಯಾಗಿದೆ. ಹುಂಡಿಯಲ್ಲಿ 1.35 ಕೋಟಿ ರೂ., ಸೀರೆ, ಲಾಡು, ಟಿಕೆಟ್ ನಿಂದ 1.30 ಕೋಟಿ ರೂ ಸಂಗ್ರಹವಾಗಿದೆ. ನಿನ್ನೆ ತಡರಾತ್ರಿವರೆಗೂ ಎಣಿಕೆ ಕಾರ್ಯ ನಡೆದಿದೆ.

ಕಳೆದ ಬಾರಿ 1.47 ಕೋಟಿ ರೂ. ಸಂಗ್ರಹವಾಗಿತ್ತು. ದೇವಿಯ ದರ್ಶನಕ್ಕೆ ರಾಜ್ಯ ಮಾತ್ರವಲ್ಲದೇ ದೇಶ, ವಿದೇಶಗಳಿಂದಲೂ ಭಕ್ತರು ಆಗಮಿಸುತ್ತಾರೆ. ಅಕ್ಟೋಬರ್ 20 ರಿಂದ ನವೆಂಬರ್ 1 ರ ವರೆಗೆ ಹಾಸನಾಂಬೆ ದರ್ಶನ ನೀಡಿದ್ದು, ನಿನ್ನೆ ಮಧ್ಯಾಹ್ನ ದೇವಾಲಯಕ್ಕೆ ಬೀಗ ಹಾಕಲಾಗಿದೆ.

13 ದಿನಗಳಲ್ಲಿ 2.65 ಕೋಟಿ ರೂ ಮೊತ್ತದ ದಾಖಲೆಯ ಪ್ರಮಾಣದ ಕಾಣಿಕೆ ಸಲ್ಲಿಕೆಯಾಗಿದೆ. ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಅನೇಕ ಗಣ್ಯರು ಕೂಡ ದರ್ಶನ ಪಡೆದುಕೊಂಡಿದ್ದಾರೆ.

ಹಾಸನಾಂಬೆ ದೇವಿಯ ಸನ್ನಿಧಿಯಲ್ಲಿ ಹಚ್ಚಿಟ್ಟ ದೀಪ ವರ್ಷದ ನಂತರ ಬಾಗಿಲು ತೆಗೆದಾಗಲೂ ಉರಿಯುತ್ತಿರುತ್ತದೆ. ವರ್ಷಕ್ಕೊಮ್ಮೆ ಮಾತ್ರ ದೇವಿಯ ದರ್ಶನ ಭಾಗ್ಯ ಸಿಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...