alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಲೇಜಿನಲ್ಲೇ ಲೈಂಗಿಕ ದೌರ್ಜನ್ಯ…?

ಬೆಂಗಳೂರು: ಬೆಂಗಳೂರು ಶೇಷಾದ್ರಿಪುರಂನಲ್ಲಿರುವ ಪ್ರತಿಷ್ಠಿತ ಕಾಲೇಜಿನಲ್ಲಿ ಸಹಾಯಕ ವ್ಯವಸ್ಥಾಪಕ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ.

ಮಹಿಳಾ ಸಿಬ್ಬಂದಿಯನ್ನು ಕೊಠಡಿಗೆ ಕರೆದು ಏನೂ ಆಗಲ್ಲ ರೊಮ್ಯಾನ್ಸ್ ಮಾಡಿ ಎನ್ನುತ್ತಾ ಅಶ್ಲೀಲವಾಗಿ ವರ್ತಿಸಿದ್ದಾನೆ ಎಂದು ನೊಂದ ಮಹಿಳಾ ಸಿಬ್ಬಂದಿ ದೂರಿದ್ದಾರೆ.

ರವಿತೇಜ ಎಂಬಾತನೇ ಇಂತಹ ಆರೋಪ ಹೊತ್ತ ಸಹಾಯಕ ವ್ಯವಸ್ಥಾಪಕ. ಒಬ್ಬರಿಗೆ ಇಬ್ಬರಿಗೆ ಮಾತ್ರವಲ್ಲ, ಕಾಲೇಜಿನ ಹಲವು ಮಹಿಳಾ ಸಿಬ್ಬಂದಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಈತನ ಕಾಟದಿಂದ ಬೇಸತ್ತ ಕೆಲವು ಮಹಿಳಾ ಸಿಬ್ಬಂದಿ ಕೆಲಸ ಬಿಟ್ಟು ಹೋಗಿದ್ದಾರೆ.

ನೊಂದ ಮಹಿಳೆಯರು ಕಾಲೇಜಿನ ಆಡಳಿತ ಮಂಡಳಿಗೆ ದೂರು ನೀಡಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಆದರೆ, ಈ ಆರೋಪವನ್ನು ರವಿತೇಜ ನಿರಾಕರಿಸಿದ್ದಾರೆ. ಇದೆಲ್ಲಾ ಸುಳ್ಳಾಗಿದ್ದು, ನನ್ನಿಂದ ತಪ್ಪಾಗಿದ್ದರೆ, ಯಾವುದೇ ಶಿಕ್ಷೆ ಅನುಭವಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...