alex Certify
ಕನ್ನಡ ದುನಿಯಾ       Mobile App
       

Kannada Duniya

ಆಧುನಿಕ ಯುಗದ ಶಿಕ್ಷಕರು ಯಾರು ಗೊತ್ತಾ…?

ಇಂದು ಸೆಪ್ಟೆಂಬರ್ 5, ಶಿಕ್ಷಕರ ದಿನ. ದೇಶದೆಲ್ಲೆಡೆ ಶಿಕ್ಷಕರಿಗೆ ಶುಭಾಶಯಗಳ ಸುರಿಮಳೆ ಹರಿದು ಬರ್ತಿದೆ. ವಿದ್ಯಾರ್ಥಿಗಳು ಶಿಕ್ಷಕರಿಗೆ ಉಡುಗೊರೆ ನೀಡಿ ಶುಭ ಹಾರೈಸುತ್ತಿದ್ದಾರೆ. ಸಮಯ ಬದಲಾದಂತೆ ಶಿಕ್ಷಕರು ಹಾಗೂ ಜ್ಞಾನ ಪಡೆಯುವ ವಿಧಾನ ಕೂಡ ಬದಲಾಗ್ತಿದೆ. ತಪ್ಪು ಹೆಜ್ಜೆ ಬಗ್ಗೆ ಎಚ್ಚರಿಕೆ ನೀಡಿ ಉತ್ತಮ ದಾರಿ ತೋರಿಸುವ ಎಲ್ಲರೂ ಶಿಕ್ಷಕರು. ಹಾಗಾಗಿ ಅಂತರ್ಜಾಲ ಕೂಡ ಶಿಕ್ಷಕನ ರೀತಿಯಲ್ಲಿ ಕೆಲಸ ಮಾಡ್ತಿದೆ.

ಇತ್ತೀಚಿನ ದಿನಗಳಲ್ಲಿ ಗೂಗಲ್ ಬ್ರೌಸರ್ ಕೂಡ ಶಿಕ್ಷಕನ ಪಾತ್ರ ವಹಿಸುತ್ತಿದೆ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿಯವರೆಗೆ ನಮಗೆ ಎಲ್ಲ ರೀತಿಯ ಮಾಹಿತಿಯನ್ನು ಗೂಗಲ್ ಬ್ರೌಸರ್ ನೀಡ್ತಿದೆ. ವಿಶ್ವದ ಎಲ್ಲ ಮಾಹಿತಿ ಹೊಂದಿರುವ ಗೂಗಲ್ ಬ್ರೌಸರನ್ನು ಶಿಕ್ಷಕರ ದಿನ ನೆನೆಯುವುದ್ರಲ್ಲಿ ತಪ್ಪೇನಿಲ್ಲ.

ಪರೀಕ್ಷೆಗೂ ಮುನ್ನ ನಿಮ್ಮ ಓದಿಗೆ ನೆರವಾಗುವ ವ್ಯಕ್ತಿ ಕೂಡ ನಿಮಗೆ ಶಿಕ್ಷಕರೇ. ಕಾಲೇಜಿರಲಿ, ಶಾಲೆಯಿರಲಿ, ಪರೀಕ್ಷೆ ವೇಳೆ ನೆರವಾಗುವ ನಿಮ್ಮ ಸ್ನೇಹಿತರಿಗೂ ಶಿಕ್ಷಕರ ದಿನದ ಶುಭ ಕೋರಿ.

ಬಹುತೇಕ ಬಾರಿ ನಿಮಗೆ ನೀವೇ ಶಿಕ್ಷಕರಾಗಿರುತ್ತೀರಿ. ಮಹತ್ವದ ಸಮಯದಲ್ಲಿ ಒಳ್ಳೆ ನಿರ್ಧಾರಗಳನ್ನು ತೆಗೆದುಕೊಂಡಿರುತ್ತೀರಿ. ಹಾಗಾಗಿ ಶಿಕ್ಷಕರ ದಿನದಂದು ಆ ನಿರ್ಧಾರಗಳನ್ನು ನೆನೆದು ಶಿಕ್ಷಕರ ದಿನವನ್ನು ಆಚರಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...