alex Certify
ಕನ್ನಡ ದುನಿಯಾ       Mobile App
       

Kannada Duniya

ಬಂಡೆಗಳ ನಡುವೆ ಕಂಗೊಳಿಸುವ ಹಂಪಿ ಮಿನಿ ವಾಟರ್ ಫಾಲ್ಸ್

ಮಳೆಗಾಲದಲ್ಲಿ ಜಲಪಾತಗಳು ಜೀವಕಳೆ ಪಡೆಯುತ್ತವೆ. ಬೇಸಿಗೆಯಲ್ಲಿ ಬತ್ತಿ ಹೋಗುವ ಅನೇಕ ಜಲಪಾತಗಳು ಮಳೆಗಾಲದಲ್ಲಿ ಮೈದುಂಬಿಕೊಂಡು ಧುಮ್ಮಿಕ್ಕುತ್ತವೆ. ಮತ್ತೆ ಕೆಲವು ಫಾಲ್ಸ್ ಗಳು ವರ್ಷವಿಡೀ ಕಾಣಸಿಗುತ್ತವೆ.

ಹಂಪಿಯಲ್ಲಿ ಮಿನಿ ವಾಟರ್ ಫಾಲ್ಸ್ ಒಂದಿದ್ದು, ಬೇಸಿಗೆಯಲ್ಲಿಯೂ ಕಾಣಸಿಗುತ್ತದೆ. ಹೆಚ್ಚಿನ ಸಂಖ್ಯೆಯ ಪ್ರವಾಸಿಗರಿಗೆ ಈ ಫಾಲ್ಸ್ ಕುರಿತಾಗಿ ಮಾಹಿತಿಯೇ ಇಲ್ಲವಾಗಿದೆ. ಹೇಳಿ ಕೇಳಿ ಹಂಪಿ ಗತವೈಭವವನ್ನು ಬಿಂಬಿಸುವ ಸ್ಥಳವಾಗಿದೆ. ಶಿಲ್ಪಕಲೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬರುವ ಪ್ರವಾಸಿಗರಿಗೆ ಜಲರಾಶಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶವೂ ಸಿಗಲಿದೆ.

ಹಂಪಿಯಲ್ಲಿ ಮಲೆನಾಡನ್ನು ನೆನಪಿಸುವಂತಹ ಫಾಲ್ಸ್ ಒಂದಿದೆ. ತುಂಗಭಧ್ರಾ ನದಿಯ ಪಾತ್ರದಲ್ಲಿಯೇ ಬಂಡೆಗಳ ಮೇಲಿನಿಂದ ನೀರು ಧುಮ್ಮಿಕ್ಕುವ ದೃಶ್ಯ ನಯನಮನೋಹರವಾಗಿದೆ.

ಬೇಸಿಗೆಯಲ್ಲಿ ಕಡಿಮೆ ಪ್ರಮಾಣದಲ್ಲಿ ನೀರು ಬೀಳುತ್ತದೆ. ಮಳೆಗಾಲದಲ್ಲಿ, ತುಂಗಭದ್ರಾ ಡ್ಯಾಂನಿಂದ ನೀರು ಬಿಟ್ಟ ಸಂದರ್ಭದಲ್ಲಿ ಬಂಡೆಗಳ ಮೇಲಿನಿಂದ ರಭಸವಾಗಿ ನೀರು ಧುಮ್ಮಿಕ್ಕುತ್ತದೆ. ಹಂಪಿಯ ವಿರುಪಾಕ್ಷ ದೇವಾಲಯದ ಹಿಂಭಾಗದ ತುಂಗಭದ್ರಾ ನದಿಯ ದಂಡೆಯಲ್ಲಿ ಸುಮಾರು 1 ಕಿಲೋ ಮೀಟರ್ ನಡೆಯಬೇಕು. ತೋಟ, ಗದ್ದೆಗಳ ದಾರಿಯಲ್ಲಿ ನಡೆದುಕೊಂಡು ಮುಂದೆ ಸಾಗುತ್ತಿದ್ದಂತೆ ಹಂಪಿ ವಾಟರ್ ಫಾಲ್ಸ್ ನಿಮ್ಮನ್ನು ಸ್ವಾಗತಿಸುತ್ತದೆ.

ಬಾಳೆ ತೋಟ, ಭತ್ತ, ಕಬ್ಬಿನ ಗದ್ದೆ, ನದಿ ನೀರಿನಿಂದ ನುಣುಪಾದ ಬಂಡೆಗಳು, ಬೆಟ್ಟಗಳ ಸಾಲು, ದೇವಾಲಯ, ಪುರಾತನ ಕಟ್ಟಡಗಳು ಮೊದಲಾದವುಗಳ ನಡುವೆ ಹಂಪಿ ಮಿನಿ ವಾಟರ್ ಫಾಲ್ಸ್ ಮನಸಿಗೆ ಮುದ ನೀಡುತ್ತದೆ. ಹಂಪಿಗೆ ಭೇಟಿ ನೀಡುವವರು ಸ್ವಲ್ಪ ಸಮಯವನ್ನು ಮಿನಿ ವಾಟರ್ ಫಾಲ್ಸ್ ನೋಡಲು ಮೀಸಲಿಟ್ಟಲ್ಲಿ ಕಣ್ಣಿನ ಜೊತೆಗೆ ಮನಸಿಗೂ ಆಹ್ಲಾದವೆನಿಸುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...