alex Certify
ಕನ್ನಡ ದುನಿಯಾ       Mobile App
       

Kannada Duniya

ಹಜ್ ಯಾತ್ರೆ ಹೆಸರಲ್ಲಿ ವಂಚನೆ

hubli-haj

ಹುಬ್ಬಳ್ಳಿ: ಹಜ್ ಯಾತ್ರೆಗೆ ಕರೆದೊಯ್ಯುವುದಾಗಿ 58 ಮಂದಿಯಿಂದ 1.74 ಕೋಟಿ ರೂ. ಸಂಗ್ರಹಿಸಿದ ವ್ಯಕ್ತಿಯೊಬ್ಬ ಪರಾರಿಯಾಗಿದ್ದು, ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ ಫತೇಶಾನಗರದ ನಿವಾಸಿ ಹಸ್ಮತ್ ಖಾದ್ರಿ ಎಂಬಾತ ಹಜ್ ಯಾತ್ರೆಗೆ ಕರೆದುಕೊಂಡು ಹೋಗುವುದಾಗಿ ನಂಬಿಸಿದ್ದ. ಪಾಸ್ ಪೋರ್ಟ್ ಮತ್ತಿತರ ದಾಖಲೆ, ಪ್ರಯಾಣ ವೆಚ್ಛ ಎಂದೆಲ್ಲಾ ಹೇಳಿ ಲಕ್ಷಾಂತರ ರೂ. ಹಣ ಸಂಗ್ರಹಿಸಿದ್ದ ಎನ್ನಲಾಗಿದೆ.

ಕೆಲವರು ಕುಟುಂಬ ಸಮೇತರಾಗಿ ಹಜ್ ಯಾತ್ರೆಗೆ ತೆರಳಲು ಲಕ್ಷಾಂತರ ರೂ. ಹಣವನ್ನು ಹಸ್ಮತ್ ಖಾದ್ರಿಗೆ ಕೊಟ್ಟಿದ್ದಾರೆ.

ಆದರೆ, ಆತ ನಾಪತ್ತೆಯಾಗಿದ್ದರಿಂದ ಯಾತ್ರೆಗೆ ಹೊರಟಿದ್ದವರು ಹಣ ಕಳೆದುಕೊಂಡು ಆತಂಕಕ್ಕೆ ಒಳಗಾಗಿದ್ದು, ಹಳೆ ಹುಬ್ಬಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...