alex Certify
ಕನ್ನಡ ದುನಿಯಾ       Mobile App
       

Kannada Duniya

1 ಲಕ್ಷ ಖರ್ಚು ಮಾಡಿದ್ರೂ ನಯವಾಗಲಿಲ್ಲ ಕೂದಲು..!

hair-treatment

ಬೆಂಗಳೂರಿನ 60 ವರ್ಷದ ಮಹಿಳೆಯೊಬ್ಬರು ಸೆಲೂನ್ ಸ್ಪಾ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ. ಲಕ್ಷಾಂತರ ರೂಪಾಯಿಯನ್ನು ಸ್ಪಾಗೆ ಸುರಿದಿರುವ ಅವರಿಗೆ ಟ್ರಿಟ್ ಮೆಂಟ್ ನಿಂದ ಯಾವುದೇ ಲಾಭವಾಗಿಲ್ಲವಂತೆ. ಹಾಗಾಗಿ ಪೊಲೀಸ್ ಮೊರೆ ಹೋಗಿದ್ದಾರೆ.

ಎಚ್ ಎಸ್ ಆರ್ ಲೇಔಟ್ ನ ರತ್ನ ಕುಮಾರಿ ಎಂಬುವವರು ಇಂದಿರಾನಗರದ ಸ್ಪಾ ಒಂದಕ್ಕೆ 2014 ರಿಂದ ಹೋಗ್ತಾ ಇದ್ದರು. ಅದು ಅವರ ರೆಗ್ಯೂಲರ್ ಸ್ಪಾ ಆಗಿತ್ತು. ಹಿಂದಿನ ವರ್ಷ ಅಲ್ಲಿನವರು ಸಿಸ್ಟಿನ್ ಹೇರ್ ಟ್ರೀಟ್ಮೆಂಟ್ ಬಗ್ಗೆ ಹೇಳಿದ್ದಾರೆ. ಈ ಟ್ರೀಟ್ಮೆಂಟ್ ಪಡೆದರೆ ಕೂದಲು ನಯವಾಗುತ್ತದೆ ಎಂದಿದ್ದಾರೆ.

ಕೂದಲನ್ನು ನಯವಾಗಿ ಹೊಳೆಯುವಂತೆ ಮಾಡಿಕೊಳ್ಳಲು ಮುಂದಾಗಿದ್ದಾರೆ ರತ್ನ ಕುಮಾರಿ. ಚಿಕಿತ್ಸೆಗಾಗಿ ಸ್ಪಾಗೆ ತೆರಳುತ್ತಿದ್ದ ಅವರು ಗಂಟೆಗಟ್ಟಲೆ ಸ್ಪಾದಲ್ಲಿ ಕಳೆಯುತ್ತಿದ್ದರಂತೆ. ಜೊತೆಗೆ ಕಂಡೀಷನರ್,ಶಾಂಪು ಅಂತಾ 1 ಲಕ್ಷಕ್ಕಿಂತಲೂ ಹೆಚ್ಚು ಹಣ ಖರ್ಚು ಮಾಡಿದ್ದಾರೆ. ಆದ್ರೆ ಕೂದಲು ಮಾತ್ರ ನಯವಾಗಿಲ್ಲ. ಈ ಟ್ರಿಟ್ಮೆಂಟ್ ತಾತ್ಕಾಲಿಕ ಅಂತಾ ಮೊದಲೇ ಅಲ್ಲಿನ ಸಿಬ್ಬಂದಿ ಹೇಳಿರಲಿಲ್ಲವಂತೆ.

ಈ ಬಗ್ಗೆ ಕೇಳಿದ್ರೆ ಇನ್ನೊಮ್ಮೆ ಮಾಡಿಸಿಕೊಳ್ಳಿ ಎನ್ನುತ್ತಿದ್ದಾರೆ ಸ್ಪಾನವರು. ಹಾಗಾಗಿ ರತ್ನ ಪೊಲೀಸ್ ಮೊರೆ ಹೋಗಿದ್ದಾರೆ. ಸ್ಪಾ ವಿರುದ್ಧ ದೂರು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...