alex Certify
ಕನ್ನಡ ದುನಿಯಾ       Mobile App
       

Kannada Duniya

ಕೂದಲು ಮಾರೋ ಉದ್ಯಮಿ ಮನೆಯಲ್ಲಿ ಸಿಕ್ಕಿದ್ದೇನು…?

ಬೆಂಗಳೂರು: ಕೂದಲು ಮಾರಾಟ ಮಾಡುವ ಉದ್ಯಮಿಯ ಮನೆಯ ಮೇಲೆ ದಾಳಿ ಮಾಡಿದ ಐ.ಟಿ. ಅಧಿಕಾರಿಗಳು, ಬರೋಬ್ಬರಿ 70 ಕೋಟಿ ರೂ. ಮೌಲ್ಯದ ಅಕ್ರಮ ಸಂಪತ್ತು ಪತ್ತೆ ಹಚ್ಚಿದ್ದಾರೆ.

ಕೊಪ್ಪಳದ ವ್ಯಕ್ತಿಯೊಬ್ಬರು ಕೂದಲು ಸಂಸ್ಕರಣಾ ಉದ್ಯಮವನ್ನು ನಡೆಸುತ್ತಿದ್ದು, ಆಫ್ರಿಕಾ, ಯುರೋಪ್ ರಾಷ್ಟ್ರಗಳಿಗೆ ಕೂದಲು ರಫ್ತು ಮಾಡ್ತಾರೆ. ಬ್ಯೂಟಿ ಪಾರ್ಲರ್, ಲೇಡಿಸ್ ಹಾಸ್ಟೆಲ್, ಮನೆಗಳು ಸೇರಿದಂತೆ ವಿವಿಧೆಡೆಯಿಂದ ಕೂದಲು ಸಂಗ್ರಹಿಸಿ ಸಂಸ್ಕರಿಸಿ ರಫ್ತು ಮಾಡುತ್ತಾರೆ.

ಐ.ಟಿ. ಅಧಿಕಾರಿಗಳಿಗೆ ಹರಕೆ ನೀಡುವ ಕೂದಲಿನ ವ್ಯಾಪಾರದಲ್ಲಿ ವಂಚನೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಬಂದಿದೆ. ಈ ಮಾಹಿತಿ ಆಧರಿಸಿ, ಕೂದಲು ಉದ್ಯಮಿಯ ಮನೆ, ಕಚೇರಿ ಮೇಲೆ ದಾಳಿ ಮಾಡಿದಾಗ 70 ಕೋಟಿ ರೂ. ಮೌಲ್ಯದ ಅಕ್ರಮ ಸಂಪತ್ತು ಪತ್ತೆಯಾಗಿದೆ.

2.5 ಕೋಟಿ ರೂ. ನಗದು, 2.5 ಕೋಟಿ ರೂ. ಮೌಲ್ಯದ ಬೆಳ್ಳಿ ವಸ್ತುಗಳು ಸೇರಿದಂತೆ 70 ಕೋಟಿ ರೂ. ಮೌಲ್ಯದ ಸಂಪತ್ತು ಪತ್ತೆಯಾಗಿದೆ ಎಂದು ಐ.ಟಿ. ಇಲಾಖೆ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...