alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಚ್ಚುಗೆಗೆ ಪಾತ್ರವಾಗಿದೆ ಮೌಂಟ್ ಕಾರ್ಮೆಲ್ ವಿದ್ಯಾರ್ಥಿನಿಯರ ಈ ಕಾರ್ಯ…!

ಕ್ಯಾನ್ಸರ್ ಕಾಯಿಲೆ ಅಂದ್ರೆ ಸಾಕು, ಎದೆ ಬಡಿತ ನಿಂತಹಾಗೆ ಆಗುತ್ತದೆ. ಭಯಾನಕ ರೋಗ ಅದೆಷ್ಟೋ ಜನರ ಬಲಿ ಪಡೆದಿದೆ. ಈ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಸಹ ಸಂಘ ಸಂಸ್ಥೆಗಳು ಮಾಡುತ್ತಿವೆ.

ಕ್ಯಾನ್ಸರ್ ರೋಗ ಬಂದಾಗ, ಕಿಮೊಥೆರಫಿಗೆ ಒಳಪಟ್ಟು ಕೂದಲು ತೆಗೆಯಬೇಕಾಗುತ್ತದೆ. ಇದ್ರಿಂದ ರೋಗಿ ಖಿನ್ನತೆಗೆ ಒಳಗಾಗುತ್ತಾನೆ. ಇಂತಹ ರೋಗಿಗಳಿಗೆ ಚೈತನ್ಯ ತುಂಬುವ ಕಾರ್ಯಕ್ಕೆ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜು ವಿದ್ಯಾರ್ಥಿಗಳು ಮುಂದಾಗಿದ್ದಾರೆ. ಈ ಮೂಲಕ ಜೀವನದಲ್ಲಿ ಉತ್ಸಾಹವನ್ನೇ ಕಳೆದುಕೊಂಡ ರೋಗಿಗಳ ಬಾಳಲ್ಲಿ, ಈ ವಿದ್ಯಾರ್ಥಿನಿಯರು ಹೊಸ ಆಶಾ ಭಾವನೆ ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಸ್ವಯಂ ಉತ್ಸಾಹದಿಂದ ವಿದ್ಯಾರ್ಥಿನಿಯರು ತಮ್ಮ ತಮ್ಮ ಕೂದಲನ್ನು ದಾನ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಗಿಫ್ಟ್ ಹೇರ್, ಗಿಫ್ಟ್ ಕಾನ್ಫಿಡೆನ್ಸ್ ಅಭಿಯಾನದಡಿ ಈ ಕಾರ್ಯಕ್ರಮ ನಡೆದಿದೆ. ಈ ಅಭಿಯಾನದಲ್ಲಿ ಅದೆಷ್ಟೋ ವಿದ್ಯಾರ್ಥಿಗಳು ಕೂದಲನ್ನು ದಾನ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...