alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕೀಯ ತೊರೆಯುವ ಮಾತನಾಡಿದ ಕುಮಾರಸ್ವಾಮಿ

HD_Kumaraswamy _DC_Picture_0_1_0

ಮುಂದಿನ ಚುನಾವಣೆಯಲ್ಲಿ ರಾಜ್ಯದ ಜನತೆ ತಮ್ಮನ್ನು ಕೈ ಬಿಟ್ಟರೆ ರಾಜಕೀಯದಿಂದ ನಿವೃತ್ತಿ ಹೊಂದಿ ಚಿತ್ರರಂಗದಲ್ಲಿ ಮುಂದುವರಿಯುತ್ತೇನೆ ಎನ್ನುವ ಮೂಲಕ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಕುತೂಹಲಕ್ಕೆ ಕಾರಣರಾಗಿದ್ದಾರೆ.

ಜೆಡಿಎಸ್ ನಲ್ಲಿ ನಡೆಯುತ್ತಿರುವ ಹಲವು ಗೊಂದಲಗಳಿಂದ ಬೇಸತ್ತಿರುವಂತೆ ಕಂಡ ಕುಮಾರಸ್ವಾಮಿ ಮೈಸೂರಿನಲ್ಲಿ ಮಾತನಾಡಿ, ನಾನು ರಾಜಕೀಯ ಪ್ರವೇಶ ಮಾಡದಿದ್ದ ಪಕ್ಷದಲ್ಲಿ ಕನ್ನಡಕ್ಕೆ ಒಂದಷ್ಟು ಒಳ್ಳೆಯ ಚಿತ್ರಗಳನ್ನಾದರೂ ನೀಡುತ್ತಿದ್ದೆ ಎಂದು ತಿಳಿಸಿದರು. ಅಲ್ಲದೇ ರಾಜಕಾರಣಕ್ಕೆ ನಾನು ಬೇಕು ಎಂದು ಜನ ಬಯಸುವುದಾದರೇ ಉಪಯೋಗಿಸಿಕೊಳ್ಳಲಿ. ಇಲ್ಲವೆಂದಲ್ಲಿ 2018 ನನ್ನ ಅಂತಿಮ ಚುನಾವಣೆ ಎಂದು ಘೋಷಿಸಿದರು.

ಅಷ್ಟೇ ಅಲ್ಲ, ನನಗೆ ರಾಜಕೀಯದ ಬಗ್ಗೆ ಹತಾಶೆ ಅಥವಾ ನಿರಾಸೆ ಇಲ್ಲ ಎಂದು ಇದೇ ಸಮಯದಲ್ಲಿ ಸ್ಪಷ್ಟಪಡಿಸಿದ ಕುಮಾರಸ್ವಾಮಿ, ಆಕಸ್ಮಿಕವಾಗಿ ಸಿಕ್ಕ 20 ತಿಂಗಳ ಅವಧಿಯಲ್ಲಿ 20 ವರ್ಷ ನೆನಪಿಸಿಕೊಳ್ಳುವಂತೆ ಕೆಲಸ ಮಾಡಿರುವುದು ಖುಷಿ ತಂದಿದೆ ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...