alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಜ್ವಲ್ ರೇವಣ್ಣ ಆಸೆಗೆ ತಣ್ಣೀರೆರೆಚಿದ ಹೆಚ್.ಡಿ.ಕೆ.

ಮಂಡ್ಯ: ನಮ್ಮ ಕುಟುಂಬದಿಂದ ನಾನು ಮತ್ತು ಹೆಚ್.ಡಿ. ರೇವಣ್ಣ ಹೊರತುಪಡಿಸಿ ಬೇರೆ ಯಾರೂ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಒಂದು ವೇಳೆ ಸ್ಪರ್ಧಿಸುವುದೇ ಆದಲ್ಲಿ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಜೆ.ಡಿ.ಎಸ್. ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಿಂದ ಅನಿತಾ ಕುಮಾರಸ್ವಾಮಿ ಹಾಗೂ ಪ್ರಜ್ವಲ್ ರೇವಣ್ಣ ಅವರು ಕೂಡ ಸ್ಪರ್ಧಿಸಲಿದ್ದಾರೆ. ಪ್ರಜ್ವಲ್ ರೇವಣ್ಣ ಅವರ ಸ್ಪರ್ಧೆಗೆ ಹಸಿರು ನಿಶಾನೆ ಸಿಕ್ಕಿದೆ ಎನ್ನಲಾಗಿತ್ತಾದರೂ, ಇದಕ್ಕೆಲ್ಲಾ ಹೆಚ್.ಡಿ.ಕೆ. ತೆರೆ ಎಳೆದಿದ್ದಾರೆ.

ನಮ್ಮ ಕುಟುಂಬದಿಂದ ರೇವಣ್ಣ ಮತ್ತು ನಾನು ಮಾತ್ರ ಸ್ಪರ್ಧಿಸುತ್ತೇವೆ. ನಮ್ಮಿಬ್ಬರನ್ನು ಬಿಟ್ಟು ಬೇರೆಯವರು ಸ್ಪರ್ಧಿಸಿದಲ್ಲಿ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ.

ನಮ್ಮ ಕುಟುಂಬದವರು ರಾಜಕಾರಣಕ್ಕೆ ಸಿದ್ಧವಿದ್ದರೆ, ನಾನು ತ್ಯಾಗ ಮಾಡಲು ಸಿದ್ಧನಿದ್ದೇನೆ. ನಾನೆಲ್ಲಾ ನೋಡಿದ್ದೇನೆ. ನಮ್ಮ ಕುಟುಂಬದಿಂದ ಮೂರನೇ ಅಭ್ಯರ್ಥಿಯನ್ನು ನಿಲ್ಲಿಸುವ ಮಾತೇ ಇಲ್ಲ. ಈ ಕುರಿತು ನಾನಿಗಾಗಲೇ ಹಲವು ಸಲ ರಾಜ್ಯದ ಜನರ ಮುಂದೆ ವಾಗ್ದಾನ ಮಾಡಿದ್ದೇನೆ ಎಂದು ಹೆಚ್.ಡಿ.ಕೆ. ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಜೆ.ಡಿ.ಎಸ್. ಫೈರ್ ಬ್ರಾಂಡ್ ಪ್ರಜ್ವಲ್ ರೇವಣ್ಣ ಅವರ ಎಲೆಕ್ಷನ್ ಕನಸಿಗೆ ತಣ್ಣೀರೆರಚಿದಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...