alex Certify
ಕನ್ನಡ ದುನಿಯಾ       Mobile App
       

Kannada Duniya

‘ಕುಮಾರಸ್ವಾಮಿ ಖರೀದಿಸಲು ಯಾರಿಂದ್ಲೂ ಸಾಧ್ಯವಿಲ್ಲ’

ಬೆಂಗಳೂರು: ಬಹುಮತವಿಲ್ಲದ ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಯಾವ ಆಧಾರದ ಮೇಲೆ ರಾಜ್ಯಪಾಲರು, ಸರ್ಕಾರ ರಚಿಸಲು, ಪ್ರಮಾಣ ವಚನ ಸ್ವೀಕರಿಸಲು ಆಹ್ವಾನಿಸಿದ್ದಾರೆ ಎಂದು ಜೆ.ಡಿ.ಎಸ್. ನಾಯಕ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಪದ್ಮನಾಭನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪ ಬಹುಮತ ಹೇಗೆ ಸಾಬೀತುಪಡಿಸಲಿದ್ದಾರೆ ಎಂದು ಪ್ರಶ್ನಿಸಿದ್ದು, ಇದು ಆಪರೇಷನ್ ಕಮಲಕ್ಕೆ ಪ್ರೇರೇಪಿಸಿದಂತಿದೆ ಎಂದು ಹೇಳಿದ್ದಾರೆ.

ಅವರು ಮುಖ್ಯಮಂತ್ರಿಯಾಗಲಿ ನಮ್ಮದೇನು ಅಭ್ಯಂತರವಿಲ್ಲ. ಬಹುಮತ ಸಾಬೀತುಪಡಿಸಲು ಅಡ್ಡ ಮಾರ್ಗವನ್ನು ಹಿಡಿಯಬಾರದು. ವ್ಯವಸ್ಥೆಯನ್ನು ಹಾಳು ಮಾಡಬಾರದು. 2008 ರಲ್ಲಿ ಏನೆಲ್ಲಾ ಮಾಡಿದ್ದಾರೆ ಎಂಬುದು ಗೊತ್ತೇ ಇದೆ ಎಂದು ತಿಳಿಸಿದ್ದಾರೆ.

ಅಧಿಕಾರ ಹಿಡಿಯಲು ಅವರು ಏನು ಬೇಕಾದ್ರೂ ಮಾಡ್ತಾರೆ. ನಮ್ಮ ಶಾಸಕರು ನಮ್ಮೊಂದಿಗೆ ಇದ್ದಾರೆ. ಕುಮಾರಸ್ವಾಮಿಯನ್ನು ಖರೀದಿಸಲು ಯಾರಿಂದಲೂ ಸಾಧ್ಯವಿಲ್ಲ. ರಾಜ್ಯದ ಜನರು ನೀಡಿದ ತೀರ್ಮಾನ ಗೌರವಿಸುತ್ತೇವೆ. ನಾವು ಏನು ತಪ್ಪು ಮಾಡಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದು ಹೆಚ್.ಡಿ.ಕೆ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...