alex Certify
ಕನ್ನಡ ದುನಿಯಾ       Mobile App
       

Kannada Duniya

‘ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ACB ರಚಿಸಿದ್ರು’

ಹಾಸನ: ಕರ್ನಾಟಕದಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ತಂದವರು ನಾವು, ಲೋಕಾಯುಕ್ತವನ್ನು ಹಾಳುಗೆಡವಿ ಎ.ಸಿ.ಬಿ. ರಚಿಸಿದ್ದು ಕಾಂಗ್ರೆಸ್ ನವರು ಎಂದು ಜೆ.ಡಿ.ಎಸ್. ವರಿಷ್ಠ ಹೆಚ್.ಡಿ. ದೇವೇಗೌಡ ಆರೋಪಿಸಿದ್ದಾರೆ.

ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಕಾಂಗ್ರೆಸ್ ನವರು ಭ್ರಷ್ಟಾಚಾರ ನಿಗ್ರಹದಳ(ACB) ರಚಿಸಿದ್ರು. ಅಧಿಕಾರದಲ್ಲಿದ್ದಾಗ ಮಾಡಬಾರದ್ದನ್ನು ಮಾಡಿದ ಕಾಂಗ್ರೆಸ್ ಈಗ ಲೋಕಾಯುಕ್ತವನ್ನು ಬಲಪಡಿಸುವುದಾಗಿ ಹೇಳುತ್ತಿದೆ ಎಂದು ಟೀಕಿಸಿದ್ದಾರೆ.

ಲೋಕಾಯುಕ್ತ ಹಾಳುಗೆಡವಿ ಎ.ಸಿ.ಬಿ. ರಚಿಸಿದ ಕಾಂಗ್ರೆಸ್, ಜನರ ವಿರೋಧ ವ್ಯಕ್ತವಾದ ಬಳಿಕ ಲೋಕಾಯುಕ್ತವನ್ನು ಬಲಪಡಿಸುವ ಮಾತನಾಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಹರದನಹಳ್ಳಿಯಲ್ಲಿದ್ದ ನಾನು ಪ್ರಧಾನಿಯಾದೆ. ಯಾರ ಹಣೆಬರಹವನ್ನು ತಿದ್ದಲು ಸಾಧ್ಯವಿಲ್ಲ. ಪ್ರಜ್ವಲ್ ರೇವಣ್ಣಗೆ ಹಾಸನ ಜಿಲ್ಲೆಯ 7 ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸುವಂತೆ ಸೂಚಿಸಿದ್ದೇನೆ. ಅವಕಾಶಗಳು ತಾವಾಗಿಯೇ ಬರುತ್ತವೆ. ತಾಳ್ಮೆ ಬೇಕು. ಪ್ರಜ್ವಲ್ ಹಾಸನದಲ್ಲಿ ಎಂ.ಪಿ.ಯಾಗ್ತಾರೆ. ಯಾರ ಹಣೆಬರಹದಲ್ಲಿ ಏನು ಬರೆದಿರುತ್ತದೆಯೋ ಅದೇ ಆಗುತ್ತೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...