alex Certify
ಕನ್ನಡ ದುನಿಯಾ       Mobile App
       

Kannada Duniya

ಮೈಸೂರು ಪೊಲೀಸರ ಭರ್ಜರಿ ಬೇಟೆ

ಮೈಸೂರು: ಮಹತ್ವದ ಕಾರ್ಯಾಚರಣೆ ನಡೆಸಿರುವ ನಂಜನಗೂಡು ಠಾಣೆ ಪೊಲೀಸರು, ಅಕ್ರಮವಾಗಿ ಪಿಸ್ತೂಲ್ ಮಾರಾಟದಲ್ಲಿ ತೊಡಗಿದ್ದ ಐವರನ್ನು ಬಂಧಿಸಿದ್ದಾರೆ.

ಮೈಸೂರು ಕೇಂದ್ರ ಕಾರಾಗೃಹದಲ್ಲಿದ್ದ ಕಿಂಗ್ ಪಿನ್ ಅಪ್ಸರ್ ಪಾಶಾ ಹಾಗೂ ಧನರಾಜ್, ಶಾಹಿನ್ಯಾ, ಸಾದಿಕ್ ಪಾಶ ಸೇರಿದಂತೆ 5 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ 1 ಪಿಸ್ತೂಲ್, 12 ಜೀವಂತ ಗುಂಡು ವಶಕ್ಕೆ ಪಡೆಯಲಾಗಿದೆ.

ಅಪ್ಸರ್ ಪಾಶ ಜೈಲಿನಲ್ಲಿದ್ದುಕೊಡೇ ಪಿಸ್ತೂಲ್ ಮಾರಾಟಕ್ಕೆ ಡೀಲ್ ಕುದುರಿಸುತ್ತಿದ್ದ. ಅಲ್ಲದೇ ಈ ತಂಡ ಶ್ರೀಮಂತರನ್ನು ಬೆದರಿಸಿ ಸುಲಿಗೆ ಮಾಡುತ್ತಿತ್ತು ಎನ್ನಲಾಗಿದೆ. ಅಪ್ಸರ್ ಪಾಶ ಮೈಸೂರು, ಚಾಮರಾಜನಗರದ ಕೆಲವು ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದ.

ಪೊಲೀಸರು ಅನುಮಾನದ ಮೇಲೆ ಧನರಾಜ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಎಲ್ಲಾ ಸಂಗತಿ ಗೊತ್ತಾಗಿದೆ. ಆರೋಪಿಗಳು 60,000 ರೂ.ಗೆ ಪಿಸ್ತೂಲ್ ಮಾರಾಟ ಮಾಡುತ್ತಿದ್ದರೆಂದು ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...