alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರಿನ ಬಸವನಗುಡಿಯಲ್ಲಿ ‘ಕಡಲೆಕಾಯಿ ಪರಿಷೆ’ ಸಂಭ್ರಮ

groundnut-festival-1

ಬೆಂಗಳೂರಿನ ಬಸವನಗುಡಿಯಲ್ಲಿ ಜಾತ್ರೆ ಸಂಭ್ರಮ…..ಎಲ್ಲಿ ನೋಡಿದ್ರೂ ವೆರೈಟಿ ವೆರೈಟಿ ಕಡಲೆಕಾಯಿ. ಬೇಯಿಸಿರುವ ಕಡಲೆ ಕಾಯಿ, ಹುರಿದಿರುವ ಕಡಲೆಕಾಯಿ ಹೀಗೆ ಬಗೆ ಬಗೆಯ ರುಚಿ ರುಚಿಯ ಕಡಲೆಕಾಯಿ ಬೆಂಗಳೂರಿಗರನ್ನು ಆಕರ್ಷಿಸ್ತಾ ಇದೆ. ಇತಿಹಾಸ ಪ್ರಸಿದ್ಧ ಕಡಲೆ ಪರಿಷೆಗೆ ಇಂದು ಚಾಲನೆ ಸಿಕ್ಕಿದೆ.

ದೊಡ್ಡ ಗಣಪತಿ ದೇವಸ್ಥಾನದಲ್ಲಿ ಪೂಜೆ ಮಾಡಿ, ಗಣೇಶನಿಗೆ ಕಡಲೆ ಕಾಯಿ ಅರ್ಪಿಸಿ ಪರಿಷೆಗೆ ಚಾಲನೆ ನೀಡಲಾಗಿದೆ. ಪ್ರತಿ ವರ್ಷವೂ ಈ ಕಡಲೆಕಾಯಿ ಪರಿಷೆಗೆ ಜನಸಾಗರವೇ ಹರಿದು ಬರುತ್ತೆ.

ಮೂರು ದಿನಗಳ ಕಾಲ ನಡೆಯುವ ಜಾತ್ರೆ ಹಳ್ಳಿಯನ್ನು ನೆನಪು ಮಾಡುತ್ತದೆ. ಕಡಲೆಕಾಯಿ ಜೊತೆಗೆ ಮಕ್ಕಳ ಆಟದ ಸಾಮಗ್ರಿ, ಬಲೂನ್, ಹೆಂಗಳೆಯರಿಗಾಗಿ ಬಳೆ, ಬ್ಯಾಗ್, ಯುವಜನತೆಗೆ ಬಾಯಿ ಚಪ್ಪರಿಸಲು ಕಡಲೆಕಾಯಿ ಜೊತೆಗೆ ಪಾನಿಪುರಿ, ಮಸಾಲೆಪುರಿ ಹೀಗೆ ಎಲ್ಲ ಬಗೆಯ ವಸ್ತುಗಳೂ ಜಾತ್ರೆಯಲ್ಲಿ ಸಿಗಲಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...