alex Certify
ಕನ್ನಡ ದುನಿಯಾ       Mobile App
       

Kannada Duniya

ರಿಯಾಯಿತಿ ದರದಲ್ಲಿ ಲಭ್ಯವಾಗುತ್ತಿವೆ ರೇಷ್ಮೆ ಸೀರೆಗಳು

ಬೆಂಗಳೂರು: ಗೌರಿ ಹಾಗೂ ಗಣೇಶ ಹಬ್ಬದ ಸಡಗರದಲ್ಲಿರುವ ಮಹಿಳೆಯರಿಗೆ ಭರ್ಜರಿ ಆಫರ್ ಒಂದು ಕಾದಿದೆ. ಬೆಂಗಳೂರು, ಮೈಸೂರು ಸೇರಿದಂತೆ ವಿವಿಧೆಡೆ ರೇಷ್ಮೆ ಸೀರೆಗಳನ್ನು ಇಂದು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಆಧಾರ್ ಕಾರ್ಡ್ ಹೊಂದಿರುವ ಮಹಿಳೆಯರು ತಕ್ಷಣ ಈ ನೋಂದಣಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಲಾಟರಿ ಮೂಲಕ ಸುಂದರವಾದ ರೇಷ್ಮೆ ಸೀರೆಗಳನ್ನು ಪಡೆದುಕೊಳ್ಳಬಹುದು.

ರಾಮನಗರ, ಮೈಸೂರು, ಬೆಳಗಾವಿ, ದಾವಣಗೆರೆ, ಬೆಂಗಳೂರಿನಲ್ಲಿ ಈ ಸೀರೆ ಮಾರಾಟ ನಡೆಯುತ್ತಿದೆ. ಬೆಳಗ್ಗೆ 10 ಗಂಟೆಯಿಂದ ಆರಂಭವಾಗಿರುವ ರಿಜಿಸ್ಟರ್ ಮಧ್ಯಾಹ್ನ 3 ಗಂಟೆವರೆಗೆ ನಡೆಯಲಿದ್ದು, ಮೂರು ಗಂಟೆ ಬಳಿಕ ಲಾಟರಿ ಮೂಲಕ ಗ್ರಾಹಕರನ್ನು ಕರೆದು ಸೀರೆ ವಿತರಣೆ ಮಾಡಲಾಗುತ್ತದೆ.

ವರಮಹಾಲಕ್ಷ್ಮೀ ಹಬ್ಬಕ್ಕೆ ರೇಷ್ಮೆ ಸೀರೆ ಯೋಜನೆ ಪ್ರಕಟಿಸಿದ್ದ ರಾಜ್ಯ ಸರ್ಕಾರ ಕಾರಣಾಂತರಗಳಿಂದ ಯೋಜನೆ ಜಾರಿ ಸಾಧ್ಯವಾಗಿರಲಿಲ್ಲ. ಈಗ ರಿಯಾಯಿತಿ ದರದಲ್ಲಿ ಈ ರೇಷ್ಮೆ ಸೀರೆಯನ್ನು ನೀಡಲು ಮುಂದಾಗಿದ್ದು, ಇಂದು ಭರ್ಜರಿ ಮಾರಾಟ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...