alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಕುರಿತ ಒಂದು ಸುದ್ದಿ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಯಲ್ಲಿ ಗೊಂದಲವಾಗಿದೆ ಎಂದು ನೌಕರರ ವರ್ಗದಿಂದ ಆಕ್ರೋಶ ವ್ಯಕ್ತವಾಗಿದೆ.

ಅಖಿಲ ಕರ್ನಾಟಕ ಸರ್ಕಾರಿ ನೌಕರರ ಒಕ್ಕೂಟ, ಸಚಿವಾಲಯ ನೌಕರರ ಸಂಘ, ರಾಜ್ಯ ಸರ್ಕಾರಿ ಎಸ್.ಸಿ., ಎಸ್.ಟಿ. ನೌಕರರ ಸಮನ್ವಯ ಸಮಿತಿ, ರಾಜ್ಯ ಸರ್ಕಾರಿ ಎನ್.ಪಿ.ಎಸ್. ನೌಕರರ ಸಂಘ ಸೇರಿದಂತೆ ವಿವಿಧ ಸಂಘಗಳ ಜಂಟಿ ಕ್ರಿಯಾ ಸಮಿತಿ ನೌಕರರ ವೇತನ ತಾರತಮ್ಯದ ಕುರಿತಾಗಿ ಸಿ.ಎಂ.ಗೆ ಪತ್ರ ಬರೆದಿದೆ.

ವೇತನ ಪರಿಷ್ಕರಣೆಯ ಕುರಿತಾಗಿ 6 ನೇ ವೇತನ ಆಯೋಗದ ವರದಿಯಿಂದ ಅನ್ಯಾಯವಾಗಿದೆ ಎಂದು ಜಂಟಿ ಕ್ರಿಯಾ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ. ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ. ಗುರುಸ್ವಾಮಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಸರ್ಕಾರ ನೌಕರರನ್ನು ಜೀತದಾಳುಗಳಂತೆ ಪರಿಗಣಿಸಿದೆ ಎಂದು ದೂರಿದ್ದಾರೆ.

ವೇತನ ಆಯೋಗ ಮಾಡಿರುವ ಶಿಫಾರಸುಗಳು:

5.20 ಲಕ್ಷ ನೌಕರರ ವೇತನ ಶೇ. 30 ರಷ್ಟು ಹೆಚ್ಚಳಕ್ಕೆ ಶಿಫಾರಸು ಮಾಡಲಾಗಿದೆ. ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಸೇರಿದ ಸುಮಾರು 73,000 ಸಿಬ್ಬಂದಿಗೆ ಇದು ಅನ್ವಯಿಸಲಿದೆ. ಕನಿಷ್ಠ ವೇತನ 17,000 ರೂ., ಗರಿಷ್ಠ ವೇತನ 1,50,600 ರೂ. ಆಗಿದೆ.

ಕನಿಷ್ಠ ಪಿಂಚಣಿ ಪ್ರತಿ ತಿಂಗಳು 8,500 ರೂ., ಗರಿಷ್ಠ ಪಿಂಚಣಿ 75,300 ರೂ., 2018 ರ ಏಪ್ರಿಲ್ 1 ರಿಂದ ಆರ್ಥಿಕ ಸೌಲಭ್ಯ ಜಾರಿಗೆ ಶಿಫಾರಸು ಮಾಡಲಾಗಿದೆ. ಮನೆ ಬಾಡಿಗೆ ಭತ್ಯೆ ಸೇರಿ ಹಲವು ವಿಚಾರಗಳನ್ನು ಆಯೋಗದ ವರದಿ ಒಳಗೊಂಡಿದ್ದು, ಇದಕ್ಕೆ ನೌಕರರ ವಲಯದಿಂದ ಅಸಮಾಧಾನ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...