alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜ್ಯ ಸರ್ಕಾರಿ ನೌಕರರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್

ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿಕೂಟದ ಸರ್ಕಾರ, ರಾಜ್ಯ ಸರ್ಕಾರಿ ನೌಕರರಿಗೆ ಸದ್ಯದಲ್ಲೇ ಸಿಹಿ ಸುದ್ದಿಯೊಂದನ್ನು ನೀಡುವ ಸಾಧ್ಯತೆ ಇದೆ. ಐಟಿ ಕಂಪನಿಗಳಂತೆ ಸರ್ಕಾರಿ ನೌಕರರಿಗೂ ವಾರಕ್ಕೆ ಐದು ದಿನ ಮಾತ್ರ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.

ಇದರಿಂದ ಸರ್ಕಾರಿ ನೌಕರರು ವಾರಾಂತ್ಯದ ದಿನಗಳಂದು ತಮ್ಮ ಕುಟುಂಬದೊಂದಿಗೆ ಕಾಲ ಕಳೆಯಲು ಅವಕಾಶ ಸಿಗುತ್ತದೆ. ಅಷ್ಟೇ ಅಲ್ಲ, ಇದರಿಂದ ನೌಕರರ ಮಾನಸಿಕ ಒತ್ತಡವೂ ಕಡಿಮೆಯಾಗುತ್ತದೆ ಎಂದು ಈ ನಿರ್ಧಾರಕ್ಕೆ ಬರಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಶನಿವಾರ ಹಾಗೂ ಭಾನುವಾರ ಕಚೇರಿಗಳಿಗೆ ರಜೆ ನೀಡಿದರೆ ಅಧಿಕಾರಿಗಳ ವಾಹನದ ಪೆಟ್ರೋಲ್, ಡೀಸೆಲ್ ಉಳಿತಾಯದ ಜೊತೆಗೆ ಕಚೇರಿಗಳ ಹವಾನಿಯಂತ್ರಣ ವ್ಯವಸ್ಥೆ, ವಿದ್ಯುತ್, ನೀರು ಉಳಿತಾಯವಾಗುತ್ತದೆ ಎಂಬ ಲೆಕ್ಕಾಚಾರವೂ ಈ ನಿರ್ಧಾರದ ಹಿಂದಿದೆ ಎನ್ನಲಾಗಿದೆ.

ರಾಜ್ಯ ಸರ್ಕಾರಿ ಕಚೇರಿಗಳಲ್ಲಿ 5 ದಿನ ಕೆಲಸದ ನಿಯಮ ಜಾರಿಯಾದರೆ ಮಹಾಪುರುಷರ ಜಯಂತಿಯಂದು ಈಗ ನೀಡಲಾಗುತ್ತಿರುವ ರಜೆಯನ್ನು ರದ್ದು ಮಾಡುವ ಚಿಂತನೆಯೂ ಸರ್ಕಾರದ ಮುಖ್ಯಸ್ಥರಲ್ಲಿದೆ. ಜೊತೆಗೆ ಕಚೇರಿ ಅವಧಿಯನ್ನು ಪ್ರತಿನಿತ್ಯ ಒಂದರಿಂದ ಒಂದೂವರೆ ತಾಸು ಹೆಚ್ಚಿಸುವ ಸಾಧ್ಯತೆಯೂ ಇದೆ.

ಸರ್ಕಾರಿ ಕಚೇರಿಗಳು ವಾರಕ್ಕೆ ಐದು ದಿನ ಕಾರ್ಯನಿರ್ವಹಿಸುವ ವಿಚಾರ ಇನ್ನೂ ಆರಂಭಿಕ ಹಂತದಲ್ಲಿದ್ದು, ಇದರ ಸಾಧಕ-ಬಾಧಕಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...