alex Certify
ಕನ್ನಡ ದುನಿಯಾ       Mobile App
       

Kannada Duniya

ಎರಡನೇ ಶನಿವಾರದ ರಜೆ ಕುರಿತು ಇದ್ದ ಗೊಂದಲಗಳಿಗೆ ತೆರೆ ಎಳೆದ ಸರ್ಕಾರ

ಅಕ್ಟೋಬರ್ 13 ರ ಎರಡನೇ ಶನಿವಾರದ ರಜೆ ಕುರಿತಂತೆ ಇದ್ದ ಗೊಂದಲಗಳಿಗೆ ರಾಜ್ಯ ಸರ್ಕಾರ ತೆರೆ ಎಳೆದಿದೆ. ಎಂದಿನಂತೆ ಈ ಬಾರಿಯೂ ಎರಡನೇ ಶನಿವಾರದಂದು ರಜೆ ಇರಲಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಅಕ್ಟೋಬರ್ 18 ರ ಗುರುವಾರ ಹಾಗೂ 19 ರ ಶುಕ್ರವಾರದಂದು ದಸರಾ ಪ್ರಯುಕ್ತ ರಜೆ ಇರುವ ಕಾರಣ ರಾಜ್ಯ ಸರ್ಕಾರ, ಅಕ್ಟೋಬರ್ 13 ರ ಎರಡನೇ ಶನಿವಾರದ ರಜೆಯನ್ನು ಅಕ್ಟೋಬರ್ 20 ರ ಶನಿವಾರ ನೀಡಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದ್ದ ಕಾರಣ ಈ ಸ್ಪಷ್ಟನೆ ನೀಡಲಾಗಿದೆ.

ಆದರೆ ರಾಜ್ಯ ಸರ್ಕಾರ ಈಗ ಸ್ಪಷ್ಟನೆ ನೀಡುವ ಮೂಲಕ ಈ ಗೊಂದಲಗಳಿಗೆ ತೆರೆ ಎಳೆದಿದ್ದು, ಅಕ್ಟೋಬರ್ 13ರ ಎರಡನೇ ಶನಿವಾರ ರಜೆ ಇರುತ್ತದೆ. ಅಕ್ಟೋಬರ್ 20 ರ ಶನಿವಾರ ಎಂದಿನಂತೆ ಕಾರ್ಯ ನಿರ್ವಹಿಸಲಾಗುತ್ತದೆ ಎಂದು ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...