alex Certify
ಕನ್ನಡ ದುನಿಯಾ       Mobile App
       

Kannada Duniya

ಅಮಲಿನಲ್ಲಿ ಅವಾಂತರ ಸೃಷ್ಠಿಸಿದ

IMG-20160520-WA0047

ಮದ್ಯದ ಅಮಲಿನಲ್ಲಿ ಕೆಲವರು ಹೇಗೆಲ್ಲಾ ವರ್ತಿಸುತ್ತಾರೆ ಎಂಬುದನ್ನು ಸಾಮಾನ್ಯವಾಗಿ ನೋಡಿರುತ್ತೀರಿ. ಶಿವಮೊಗ್ಗದಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ದೇವಾಲಯದ ಪ್ರವೇಶ ದ್ವಾರದ ಗೋಪುರ ಏರಿ ಅವಾಂತರ ಸೃಷ್ಠಿಸಿದ ಘಟನೆ ನಡೆದಿದೆ.

ಕಾಶಿಪುರ ಬಡಾವಣೆಯಲ್ಲಿರುವ, ಪ್ರಮುಖ ದೇವಾಲಯವೊಂದರ ಪ್ರವೇಶದ್ವಾರದ ಗೋಪುರ ಹತ್ತಿದ್ದ, ಆಂಧ್ರಪ್ರದೇಶ ಮೂಲದ 27 ವರ್ಷದ ವ್ಯಕ್ತಿ ನರಸಿಂಹ ಎಂಬಾತ ಅಲ್ಲಿದ್ದವರಿಗೆಲ್ಲಾ ಗಾಬರಿಯಾಗುವಂತೆ ಮಾಡಿದ್ದಾನೆ. ಆತ್ಮಹತ್ಯೆ ಮಾಡಿಕೊಳ್ಳಲು ಈತ ಗೋಪುರ ಹತ್ತಿರಬಹುದೆಂದು ಭಾವಿಸಿದ ಜನ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ, ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆತನನ್ನು ಕೆಳಕ್ಕೆ ಇಳಿಸಿದ್ದಾರೆ.

ನರಸಿಂಹ ಶಿವಮೊಗ್ಗದಲ್ಲಿ ಕೆಲಸ ಮಾಡಿಕೊಂಡಿದ್ದು, ಶುಕ್ರವಾರ ಕೆಲಸಕ್ಕೆ ಹೋಗದೇ ವಿಪರೀತ ಮದ್ಯ ಸೇವಿಸಿದ್ದಾನೆ. ಮದ್ಯದ ಅಮಲಿನಲ್ಲಿ ಗೋಪುರ ಏರಿದ್ದು, ಇದನ್ನು ಕಂಡ ಸಾರ್ವಜನಿಕರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೊನೆಗೆ ಹಗ್ಗ ಮತ್ತು ಏಣಿಯ ನೆರವಿನಿಂದ ಆತನನ್ನು ಕೆಳಕ್ಕೆ ಇಳಿಸಿದ್ದಾರೆ. ಜೊತೆಗೆ ಮದ್ಯದ ಅಮಲನ್ನೂ ಇಳಿಸಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...