alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಕನ್ನಡವೂ ಸೇರಿದಂತೆ 9 ಭಾಷೆಯಲ್ಲಿ ಗೂಗಲ್ ಸುರಕ್ಷತೆಯ‌ ಮಾಹಿತಿ

ಇತ್ತೀಚಿನ ದಿನದಲ್ಲಿ‌ ಹೆಚ್ಚುತ್ತಿರುವ ಆನ್ ಲೈನ್ ವಂಚನೆ, ಡೇಟಾ‌ ಕಳವು ಸೇರಿದಂತೆ ಹಲವು‌ ಸುರಕ್ಷತಾ ಕ್ರಮಗಳ ಬಗ್ಗೆ 9 ಸ್ಥಳೀಯ ಭಾಷೆಯಲ್ಲಿ‌ ಮಾಹಿತಿ ನೀಡಲು ಗೂಗಲ್ ಮುಂದಾಗಿದೆ.

ಈಗಾಗಲೇ ಗೂಗಲ್ ಬಳಕೆದಾರರಿಗೆ ಆನ್ ಲೈನ್ ಸುರಕ್ಷತೆ ಬಗ್ಗೆ ಸೂಕ್ತ ಮಾಹಿತಿ ನೀಡಲು‌ ಅನೇಕ ಯೋಜನೆ ರೂಪಿಸಲಾಗಿದೆ. ಆದರೆ ಇದೀಗ ಇದಕ್ಕಾಗಿಯೇ ಗೂಗಲ್ ಸುರಕ್ಷತಾ ಕೇಂದ್ರ ಎನ್ನುವ ಪ್ರತ್ಯೇಕ ವೆಬ್‌ ಸೈಟ್ ಆರಂಭಿಸಿದೆ.‌ ಕನ್ನಡ, ಹಿಂದಿ, ಗುಜರಾತಿ, ಬೆಂಗಾಲಿ, ಮಲಯಾಳಂ, ತಮಿಳು, ತೆಲುಗು, ಮರಾಠಿ ಹಾಗೂ ಉರ್ದು ಭಾಷೆಯಲ್ಲಿ ಬಳಕೆದಾರರಿಗೆ ಮಾಹಿತಿ ನೀಡಲಾಗುವುದು ಎಂದು ಸಂಸ್ಥೆ ಹೇಳಿದೆ.

ಬಳಕೆದಾರರಿಗೆ ಡೇಟಾ ಸೆಕ್ಯೂರಿಟಿ, ಪ್ರೈವೆಸಿ ಪಾಲಿಸಿ ಹಾಗೂ ಉತ್ತಮ ಕಾರ್ಯಕ್ಕೆ ತಂತ್ರಜ್ಞಾನವನ್ನು ಯಾವ ರೀತಿ ಬಳಸಬೇಕೆಂಬ ಕುರಿತು ಈ ಪ್ರತ್ಯೇಕ ಸೈಟ್ ನಲ್ಲಿ‌ ಮಾಹಿತಿ ನೀಡಲಾಗಿದೆ. ಇದರಿಂದ ಬಳಕೆದಾರರು ಮೋಸ ಹೋಗುವುದನ್ನು ತಪ್ಪಿಸಬಹುದು ಎಂದು ಗೂಗಲ್ ಅಭಿಪ್ರಾಯಪಟ್ಟಿದೆ.

ತಂತ್ರಜ್ಞಾನ ಬದಲಾದಂತೆ ಅದಕ್ಕೆ ತಕ್ಕಂತೆ ಬಳಕೆದಾರರನ್ನು ಅಪ್ಡೇಟ್ ಮಾಡಬೇಕಾಗುತ್ತದೆ. ಆದ್ದರಿಂದ ಈ ಪ್ರತ್ಯೇಕ ಸೈಟ್ ಆರಂಭಿಸಲಾಗಿದೆ. ಇದರೊಂದಿಗೆ ಗೂಗಲ್ ಅಸಿಸ್ಟೆಂಟ್ ಗೆ ಹಿಂದಿಯಲ್ಲಿ ಮಾತನಾಡಿದರೆ, ಪ್ರತಿಕ್ರಿಯಿಸುವುದಕ್ಕೆ ಅಗತ್ಯವಿರುವ ‌ಡೇಟಾವನ್ನು ಒದಗಿಸಲಾಗಿದೆ ಎಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...