alex Certify
ಕನ್ನಡ ದುನಿಯಾ       Mobile App
       

Kannada Duniya

ವಾಡಿಯಲ್ಲಿ ಹಳಿತಪ್ಪಿದ ಗೂಡ್ಸ್ ರೈಲು

ಕಲಬುರಗಿ: ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ವಾಡಿ ಜಂಕ್ಷನ್ ನಲ್ಲಿ ಗೂಡ್ಸ್ ರೈಲಿನ 2 ಬೋಗಿಗಳು ಹಳಿ ತಪ್ಪಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ.

ವಾಡಿ ಜಂಕ್ಷನ್ ನಿಂದ ಸಿಮೆಂಟ್ ಕಾರ್ಖಾನೆಯೊಳಗೆ ತೆರಳುವಾಗ 2 ಬೋಗಿಗಳು ಹಳಿಯಿಂದ ಜಾರಿವೆ. ಇದರಿಂದಾಗಿ ರಸ್ತೆ ಸಂಪರ್ಕ ಬಂದ್ ಆಗಿದೆ. ವಾಹನಗಳು ದೂರದವರೆಗೂ ಸಾಲುಗಟ್ಟಿ ನಿಲ್ಲುವಂತಾಗಿದೆ.

ಸ್ಥಳಕ್ಕೆ ರೈಲ್ವೇ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಳಿ ತಪ್ಪಿದ ಬೋಗಿಗಳನ್ನು ಸರಿಪಡಿಸಲು ಕಾರ್ಯಾಚರಣೆ ನಡೆಸಲಾಗಿದೆ. ಇತ್ತೀಚೆಗಷ್ಟೇ ವಾಡಿಯಲ್ಲಿ ಫ್ಲಾಟ್ ಫಾರಂಗೆ ರೈಲಿನ ಇಂಜಿನ್ ಡಿಕ್ಕಿ ಹೊಡೆದು ಫ್ಲಾಟ್ ಫಾರಂ ಗೋಡೆಗೆ ಹಾನಿಯಾಗಿತ್ತು.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...