alex Certify
ಕನ್ನಡ ದುನಿಯಾ       Mobile App
       

Kannada Duniya

ಕಸದ ಬುಟ್ಟಿಯಲ್ಲಿತ್ತು 2.8 ಕೆ.ಜಿ. ಚಿನ್ನ…!

ಕಸದ ಬುಟ್ಟಿಯಲ್ಲಿ ಅಡಗಿಸಿಡಲಾಗಿದ್ದ 87.69 ಲಕ್ಷ ರೂ. ಮೌಲ್ಯದ 2.8 ಕೆ.ಜಿ. ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಅಂತರಾಷ್ಟ್ರೀಯ ನಿರ್ಗಮನ ವಿಭಾಗದಲ್ಲಿದ್ದ ಕಸದಬುಟ್ಟಿಯಲ್ಲಿ ಈ ಚಿನ್ನವನ್ನು ಅಡಗಿಸಿಡಲಾಗಿತ್ತೆಂದು ಹೇಳಲಾಗಿದ್ದು, ಪರಿಶೀಲನೆ ವೇಳೆ ಪತ್ತೆಯಾಗಿದೆ.

ಪ್ರಯಾಣಿಕರ ಸೋಗಿನಲ್ಲಿ ವಿದೇಶದಿಂದ ಬರುವ ಚಿನ್ನ ಕಳ್ಳಸಾಗಾಣಿಕೆದಾರರು, ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬೇರೆ ರಾಷ್ಟ್ರಕ್ಕೆ ಪ್ರಯಾಣಿಸ ವೇಳೆ ಟ್ರಾನ್ಸಿಟ್ ಅವಧಿಯಲ್ಲಿ ಈ ಚಿನ್ನವನ್ನು ಕಸದ ಬುಟ್ಟಿಯಲ್ಲಿ ಅಡಗಿಸಿಡುತ್ತಾರೆನ್ನಲಾಗಿದ್ದು, ಬಳಿಕ ನಿಲ್ದಾಣದ ಕೆಲ ಸಿಬ್ಬಂದಿಗಳ ಸಹಕಾರದಿಂದ ಹೊರ ಸಾಗಿಸಲಾಗುತ್ತದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...