alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ಬಳಿಯಿದ್ದ ಚಿನ್ನಕ್ಕೆ ಕನ್ನ ಹಾಕಿದ್ಲು ಖತರ್ನಾಕ್ ಪತ್ನಿ

gold-barsಪತ್ನಿಯೊಬ್ಬಳು ತನ್ನ ಪತಿ ಬಳಿಯಿದ್ದ ಚಿನ್ನಕ್ಕೆ ಕನ್ನ ಹಾಕಿ ನಂತರ ಕಥೆ ಕಟ್ಟಿದ್ದ ವಿಲಕ್ಷಣ ಪ್ರಕರಣ ಬೆಳಕಿಗೆ ಬಂದಿದೆ. ಪತಿಗೆ ಮತ್ತು ಬರುವ ಔಷಧಿ ನೀಡಿದ್ದ ಈ ಖತರ್ನಾಕ್ ಪತ್ನಿ ನಂತರ ಆತನ ಬಳಿಯಿದ್ದ ಚಿನ್ನವನ್ನು ಅಪಹರಿಸಿದ್ದಳಲ್ಲದೇ ಯಾರೋ ಕಳ್ಳರು ಚಿನ್ನವಿದ್ದ ಬ್ಯಾಗ್ ಕದ್ದುಕೊಂಡು ಹೋಗಿದ್ದಾಗಿ ಕಥೆ ಕಟ್ಟಿದ್ದಳು. ಇದೀಗ ಪೊಲೀಸರು ಪ್ರಕರಣವನ್ನು ಬೇಧಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಜ್ಯೂವೆಲರ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮುನಿಯಪ್ಪನ್ ಆಭರಣ ಮಾಡಿಸಿಕೊಂಡು ಬರುವ ಸಲುವಾಗಿ ವಾರಕ್ಕೊಮ್ಮೆ ಚಿನ್ನದ ಗಟ್ಟಿಗಳನ್ನು ತಮಿಳುನಾಡಿಗೆ ತೆಗೆದುಕೊಂಡು ಹೋಗುತ್ತಿದ್ದರು. ಈ ವಿಚಾರ ಆತನ ಪತ್ನಿ ನಾಗಲಕ್ಷ್ಮೀಗೂ ತಿಳಿದಿತ್ತು. ಫೆಬ್ರವರಿ 20 ರಂದು ಪತಿ ಚಿನ್ನದ ಗಟ್ಟಿ ತೆಗೆದುಕೊಂಡು ಹೊರಟ ವೇಳೆ ನಾಗಲಕ್ಷ್ಮೀ ತಾನೂ ಬರುವುದಾಗಿ ಹೇಳಿದ್ದಾಳೆ.

ಮಾರ್ಗ ಮಧ್ಯೆ ಸೇಲಂ ಬಳಿ ಪತಿಗೆ ಮತ್ತು ಬರುವ ಔಷಧ ನೀಡಿದ ನಾಗಲಕ್ಷ್ಮೀ ಆತ ನಿದ್ರೆಗೆ ಜಾರಿದ ನಂತರ ಚಿನ್ನವನ್ನು ದೋಚಿದ್ದಾಳೆ. ಬಳಿಕ ಯಾರೋ ಕಳ್ಳರು ಚಿನ್ನವಿದ್ದ ಬ್ಯಾಗ್ ದೋಚಿಕೊಂಡು ಹೋಗಿದ್ದಾರೆಂದು ಗೋಳಾಡಿದ್ದಾಳೆ. ಮುನಿಯಪ್ಪನ್ ಈ ವಿಚಾರವನ್ನು ಜ್ಯೂವೆಲರ್ಸ್ ಮ್ಯಾನೇಜರ್ ಗೆ ತಿಳಿಸಿದ್ದು, ಅವರು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರ ತನಿಖೆ ವೇಳೆ ನಾಗಲಕ್ಷ್ಮೀಯ ಅಸಲಿಯತ್ತು ಬಯಲಾಗಿದ್ದು, ಆಕೆಯನ್ನು ಈಗ ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...