alex Certify
ಕನ್ನಡ ದುನಿಯಾ       Mobile App
       

Kannada Duniya

ವಧುವಿನ ಕೋಣೆಯಲ್ಲಿ ಒಡವೆ ಕಳುವಿಗೆ ಯತ್ನ

ಶಿವಮೊಗ್ಗ : ನಗರದ ಗಾಂಧಿ ಬಜಾರ್ ಕನ್ನಿಕಾ ಪರಮೇಶ್ವರಿ ದೇವಾಲಯದ ಮದುವೆ ಮನೆಯಲ್ಲಿ ಚಿನ್ನಾಭರಣ, ನಗದು ದೋಚಿದ ಘಟನೆ ನಡೆದ ಬೆನ್ನಲ್ಲೇ ಗೌಡಸಾರಸ್ವತ ಕಲ್ಯಾಣ ಮಂಟಪದಲ್ಲಿ ಕಳವಿಗೆ ಯತ್ನಿಸಿದ ಪ್ರಕರಣ ನಡೆದಿದೆ.

ಭಾನುವಾರ ರಾತ್ರಿ ಸಂಬಂಧಿಕರ ರೀತಿಯಲ್ಲಿ ಕಲ್ಯಾಣ ಮಂಟಪಕ್ಕೆ ಬಂದಿದ್ದ ಬೊಮ್ಮನಕಟ್ಟೆಯ ಜುಬೇರ್ ಎಂಬಾತ ವಧುವಿನ ಕೋಣೆಗೆ ನುಗ್ಗಿ ಹಣ, ಒಡವೆ ಕದಿಯಲು ಮುಂದಾಗಿದ್ದಾನೆ.

ಇದನ್ನು ಗಮನಿಸಿದ ಮದುವೆ ಮನೆಯಲ್ಲಿದ್ದವರು ಕೂಗಾಡಿದ್ದು, ಜುಬೇರ್ ನನ್ನು ಹಿಡಿದು ಥಳಿಸಿದ್ದಾರೆ. ವಧುವಿನ ಕೊಠಡಿಯಲ್ಲೇ ಆತನನ್ನು ಥಳಿಸಿ ದೊಡ್ಡಪೇಟೆ ಠಾಣೆ  ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ಧಾರೆ.

ಭಾನುವಾರ ಮಧ್ಯಾಹ್ನ ಗಾಂಧಿ ಬಜಾರ್ ನ ಕನ್ನಿಕಾ ಪರಮೇಶ್ವರಿ ದೇವಾಲಯದ ಲ್ಲಿ ವಧುನಿನ ಕೋಣೆಯಲ್ಲಿದ್ದ 100 ಗ್ರಾಂ. ಚಿನ್ನಾಭರಣ ಹಾಗೂ 45 ರೂ. ಸಾವಿರ ದೋಚಲಾಗಿದ್ದು ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...