alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರ ಒಳ ಉಡುಪಿನಲ್ಲಿತ್ತು ಚಿನ್ನ…!

ಅಕ್ರಮವಾಗಿ ಚಿನ್ನ ಸಾಗಾಣಿಕೆ ಮಾಡಲು ಖದೀಮರು ಹಲವು ಮಾರ್ಗಗಳನ್ನು ಅನುಸರಿಸುತ್ತಾರಾದರೂ ಬಹಳಷ್ಟು ಸಂದರ್ಭಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬೀಳುತ್ತಾರೆ. ಅಂತಹುದೇ ಪ್ರಕರಣವೊಂದರ ವರದಿ ಇಲ್ಲಿದೆ.

ವಿದೇಶದಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಇಬ್ಬರು ಮಹಿಳೆಯರನ್ನು ತಪಾಸಣೆಗೊಳಪಡಿಸಿದ ವೇಳೆ ಅವರ ಒಳ ಉಡುಪಿನಲ್ಲಿ 50 ಲಕ್ಷ ರೂ. ಗೂ ಅಧಿಕ ಮೌಲ್ಯದ ಚಿನ್ನದ ಪುಡಿ ಪತ್ತೆಯಾಗಿದೆ.

ಮುಂಬೈ ಮೂಲದ ಷಹೀದಾ ಭಾನು ಹಾಗೂ ಶಕೀಲಾ ಶೇಕ್ ಬಂಧಿತ ಆರೋಪಿಗಳಾಗಿದ್ದು, ಇವರುಗಳು 1 ಕೆಜಿ 649 ಗ್ರಾಂ ಚಿನ್ನವನ್ನು ಪುಡಿ ರೂಪದಲ್ಲಿ ತಮ್ಮ ಒಳ ಉಡುಪಿನಲ್ಲಿ ಅಡಗಿಸಿಟ್ಟುಕೊಂಡಿದ್ದರೆಂದು ಹೇಳಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು ಇದರ ಹಿಂದೆ ವ್ಯವಸ್ಥಿತ ಕಳ್ಳ ಸಾಗಾಣಿಕೆ ಜಾಲ ಇರಬಹುದೆಂಬ ಶಂಕೆ ಮೇರೆಗೆ ವಿಚಾರಣೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...