alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರಿನಲ್ಲಿ ಕಳೆದ ರಾತ್ರಿ ನಡೆದಿದೆ ಬೆಚ್ಚಿ ಬೀಳಿಸುವ ಕೃತ್ಯ

ಕಳೆದ ರಾತ್ರಿ ಬೆಂಗಳೂರು ಉತ್ತರ ತಾಲೂಕಿನ ಮಾಗಡಿ ರಸ್ತೆಯ ಮಾಚೋಹಳ್ಳಿ ಗೇಟ್ ಬಳಿ ಇದ್ದ ಚಿನ್ನಾಭರಣ ಅಂಗಡಿಗೆ ಏಕಾಏಕಿ ನುಗ್ಗಿದ ಆರು ಮಂದಿ ದರೋಡೆಕೋರರ ತಂಡ, ಅಂಗಡಿ ಮಾಲೀಕನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದೆ.

ಬೈಕ್ ನಲ್ಲಿ ಬಂದಿದ್ದ ಈ ದರೋಡೆಕೋರರ ತಂಡ ಮಚ್ಚು, ಲಾಂಗುಗಳನ್ನು ಬೀಸುತ್ತಾ ರಾಜಸ್ಥಾನ್ ಮೂಲದ ಚಂದಾರಾಮ್ ಎಂಬವರ ಚಿನ್ನಾಭರಣ ಅಂಗಡಿ ಒಳ ನುಗ್ಗಿದ್ದು, ಮಾಲೀಕ ಹಾಗೂ ಸಿಬ್ಬಂದಿಯನ್ನು ಬೆದರಿಸಿದೆ. ಚಿನ್ನವನ್ನು ತುಂಬಿಕೊಳ್ಳುವ ವೇಳೆ ಪ್ರತಿರೋಧ ಒಡ್ಡಿದಾಗ ಚಂದಾರಾಮ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಲಾಗಿದೆ.

ಈ ವೇಳೆ ಚೀರಾಟ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯರಿಗೂ ಮಚ್ಚು ತೋರಿಸಿ ಬೆದರಿಕೆ ಹಾಕಲಾಗಿದ್ದು, ಆದರೂ ಸಾಹಸ ಪ್ರದರ್ಶಿಸಿ ದರೋಡೆಕೋರರ ಪೈಕಿ ಓರ್ವನನ್ನು ಹಿಡಿಯಲಾಗಿದೆ. ಇನ್ನುಳಿದ ದರೋಡೆಕೋರರು ಚಿನ್ನ ದೋಚಿಕೊಂಡು ಪರಾರಿಯಾಗಿದ್ದು, ದರೋಡೆಕೋರರ ದಾಳಿಯಲ್ಲಿ ಗಾಯಗೊಂಡಿದ್ದ ಚಂದಾರಾಮ್ ನನ್ನು ಸುಂಕದಕಟ್ಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾದನಾಯಕನ ಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಸೆರೆ ಹಿಡಿಯಲಾಗಿದ್ದ ಓರ್ವ ದರೋಡೆಕೋರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...