alex Certify
ಕನ್ನಡ ದುನಿಯಾ       Mobile App
       

Kannada Duniya

ದಾಖಲೆ ಬರೆದ ಅಕ್ಷಯ ತೃತೀಯ ಚಿನ್ನ, ಬೆಳ್ಳಿ ಮಾರಾಟ

gold jewellery mn 10

ಬೆಂಗಳೂರು: ಅಕ್ಷಯ ತೃತೀಯದಂದು ಚಿನ್ನ, ಬೆಳ್ಳಿ ಖರೀದಿಸಿದರೆ ಒಳಿತಾಗುತ್ತದೆ ಎಂಬ ಕಾರಣದಿಂದ ಜನ ಖರೀದಿಗೆ ಮುಗಿಬಿದ್ದಿದ್ದು, ದಾಖಲೆಯ ವ್ಯಾಪಾರವಾಗಿದೆ. ಚಿನ್ನದ ಅಂಗಡಿಗಳಲ್ಲಿ ಕೋಟ್ಯಾಂತರ ರೂಪಾಯಿಯ ವ್ಯಾಪಾರ, ವಹಿವಾಟು ನಡೆದಿದೆ.

ರಾಜ್ಯದ ಬಹುತೇಕ ಕಡೆಗಳಲ್ಲಿ ಚಿನ್ನಾಭರಣ ಅಂಗಡಿಗಳು ಭರ್ಜರಿ ವ್ಯಾಪಾರ ನಡೆಸಿವೆ. ಬರ, ಭಾರೀ ಬೆಲೆ ಏರಿಕೆಯ ನಡುವೆಯೂ, ಖರೀದಿಗೆ ಜನ ಮುಗಿಬಿದ್ದಿದ್ದರು.ಕೊಳ್ಳುಬಾಕ ಸಂಸ್ಕೃತಿ ಹೆಚ್ಚಾಗಿದ್ದ ಕಾರಣ, ರಾಜ್ಯದಲ್ಲಿ ಸುಮಾರು 2236 ಕೆಜಿ ಚಿನ್ನ ಹಾಗೂ 1488 ಕೆಜಿ ಬೆಳ್ಳಿ ಆಭರಣಗಳನ್ನು ಮಾರಾಟ ಮಾಡಲಾಗಿದೆ. ಬೆಂಗಳೂರು, ಬೆಳಗಾವಿ, ಹುಬ್ಬಳ್ಳಿ ಮೊದಲಾದ ಕಡೆಗಳಲ್ಲಿ ಜನ ಮುಗಿಬಿದ್ದು ಚಿನ್ನ ಖರೀದಿಸಿದ್ದಾರೆ. ಕೆಲವು ಚಿನ್ನಾಭರಣ ಅಂಗಡಿಗಳಲ್ಲಿ ವಿಶೇಷ ರಿಯಾಯಿತಿ ಘೋಷಿಸಲಾಗಿತ್ತು.

ಬೆಳಿಗ್ಗೆಯಿಂದ ರಾತ್ರಿವರೆಗೂ ವ್ಯಾಪಾರ, ವಹಿವಾಟು ನಡೆಸಲಾಗಿದ್ದು, ಸುಮಾರು 637.48 ಕೋಟಿ ರೂ. ಚಿನ್ನಾಭರಣ, 6.28 ಕೋಟಿ ರೂ. ಮೌಲ್ಯದ ಬೆಳ್ಳಿಯ ಆಭರಣ ಮಾರಾಟವಾಗಿವೆ. ಬಸವ ಜಯಂತಿ ಪ್ರಯುಕ್ತ ರಜೆ ಇದ್ದ ಕಾರಣ, ಅಕ್ಷಯ ತೃತೀಯ ಚಿನ್ನಾಭರಣ ಖರೀದಿ ಎಂದಿಗಿಂತಲೂ ಈ ಬಾರಿ ಜೋರಾಗಿತ್ತು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...