alex Certify
ಕನ್ನಡ ದುನಿಯಾ       Mobile App
       

Kannada Duniya

ತಪಾಸಣೆಯಲ್ಲಿ ಬಯಲಾಯ್ತು ಆಕೆಯ ಚಿನ್ನದ ಅಸಲಿಯತ್ತು

gold-coins

ಬೆಂಗಳೂರು: ಚಿನ್ನದ ಬೆಲೆ ಮಾರುಕಟ್ಟೆಯಲ್ಲಿ ಏರಿಳಿತ ಕಾಣುತ್ತಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಚಿನ್ನವನ್ನು ಕಳ್ಳಮಾರ್ಗಗಳ ಮೂಲಕ ಸಾಗಾಣೆ ಮಾಡುವವರ ಸಂಖ್ಯೆಯೂ ಜಾಸ್ತಿಯಾಗಿದೆ. ವಿದೇಶಗಳಿಂದ ಕದ್ದುಮುಚ್ಚಿ ಚಿನ್ನವನ್ನು ಸಾಗಿಸುವುದು ಈಗ ಮಾಮೂಲಿ ಎನ್ನುವಂತಾಗಿದೆ.

ಹೀಗೆ ವಿದೇಶದಿಂದ ಕದ್ದುಮುಚ್ಚಿ ಚಿನ್ನ ಸಾಗಿಸುತ್ತಿದ್ದ ಮಹಿಳೆಯೊಬ್ಬರನ್ನು ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ದುಬೈನಿಂದ ಬಂದ ವಿಮಾನ ಇಳಿದ ಆಂಧ್ರಪ್ರದೇಶದ ತುಳಸಮ್ಮ ಎಂಬುವವರನ್ನು ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಆಕೆಯ ಬಳಿ ಬರೋಬ್ಬರಿ 3.2ಕೆಜಿ ಚಿನ್ನಾಭರಣ ಪತ್ತೆಯಾಗಿವೆ. ದುಬೈನಿಂದ ಈಕೆ ಚಿನ್ನ ಸಾಗಿಸುವ ಮಾಹಿತಿ ಮೊದಲೇ ತಿಳಿದಿದ್ದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡರು.

ಆದರೆ, ವೀಲ್ ಚೇರ್ ನಲ್ಲಿ ಕುಳಿತು ನಿಲ್ದಾಣದಿಂದ ತಪ್ಪಿಸಿಕೊಳ್ಳಲು ತುಳಸಮ್ಮ ಭಾರೀ ನಾಟಕವನ್ನೇ ಮಾಡಿದ್ದಾಳೆ. ತಪಾಸಣೆಗೆ ಕಸ್ಟಮ್ಸ್ ಅಧಿಕಾರಿಗಳು ಮುಂದಾದರೂ ಆಕೆ ತಪ್ಪಿಸಿಕೊಳ್ಳಲು ನಾಟಕವಾಡಿದ್ದಾಳೆ. ಕೊನೆಗೆ ಆಕೆಯನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ 3.2 ಕೆಜಿ ಚಿನ್ನ ಪತ್ತೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...