alex Certify
ಕನ್ನಡ ದುನಿಯಾ       Mobile App
       

Kannada Duniya

ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ವಂಚಿಸುತ್ತಿದ್ದ ಗ್ಯಾಂಗ್

gang arrest

ಬೆಂಗಳೂರು: ಒಂಟಿ ಮಹಿಳೆಯರು, ವೃದ್ಧೆಯರನ್ನು ಟಾರ್ಗೆಟ್ ಮಾಡಿ, ಅವರಿಂದ ಚಿನ್ನಾಭರಣ ಪಡೆದು ವಂಚಿಸುತ್ತಿದ್ದ ಗ್ಯಾಂಗ್ ಒಂದನ್ನು, ಬೆಂಗಳೂರು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಸಂತೆಬೆನ್ನೂರು ಸಮೀಪದ ಚಿಕ್ಕಬೆನ್ನೂರಿನ 9 ಮಂದಿಯನ್ನು ಬಂಧಿಸಲಾಗಿದೆ.

ಮಾರುಕಟ್ಟೆ, ರೈಲ್ವೇ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಒಂಟಿ ಮಹಿಳೆಯರು, ವೃದ್ಧೆಯರನ್ನು ವಂಚಿಸಿ ಚಿನ್ನಾಭರಣ ದೋಚುತ್ತಿದ್ದ ಶೇಷಮ್ಮ, ಸುಶೀಲಮ್ಮ, ನಾಗಮ್ಮ, ಆಂಜಿನಪ್ಪ, ಶಾಮಣ್ಣ, ತಿಪ್ಪೇಶ್, ವೆಂಕಟೇಶ್ ಸೇರಿದಂತೆ 9 ಮಂದಿಯನ್ನು ಬಂಧಿಸಲಾಗಿದೆ. ವೃದ್ಧೆಯರ ಬಳಿ ಇವರ ಗ್ಯಾಂಗ್ ನ ಮಹಿಳೆಯೊಬ್ಬಳು, ಬಂದು ವಿಳಾಸ ಕೇಳಿ, ಬಳಿಕ ಹಣವಿಲ್ಲ, ನನ್ನ ಬಳಿ ಇರುವ ಚಿನ್ನದ ಸರ ಇಟ್ಟುಕೊಳ್ಳಿ. ನಿಮ್ಮಲ್ಲಿರುವ ಚಿನ್ನಕ್ಕಿಂತ ಹೆಚ್ಚಿನ ತೂಕವನ್ನು ಇದು ಹೊಂದಿದೆ. ನಿಮ್ಮ ಸರ ಕೊಡಿ ಎಂದು ಹೇಳುತ್ತಿದ್ದರು.

ಇದೇ ಸಮಯಕ್ಕೆ ಒಂದಿಬ್ಬರು ಗಂಡಸರು ಬಂದು, ಬಡ ಮಹಿಳೆಗೆ ಸಹಾಯ ಮಾಡಿ ಎಂದು ಹೇಳಿ ಯಾಮಾರಿಸುತ್ತಿದ್ದರು. ಬಳಿಕ ಅವರಿಂದ ಚಿನ್ನದ ಸರ ಪಡೆದು ತಮ್ಮಲ್ಲಿದ್ದ ನಕಲಿ ಚಿನ್ನದ ಸರ ಕೊಟ್ಟು ಪರಾರಿಯಾಗುತ್ತಿದ್ದರು ಎನ್ನಲಾಗಿದೆ.

ಹೀಗೆ ಗೌರಮ್ಮ ಎಂಬ ವೃದ್ಧೆಗೆ ಯಶವಂತಪುರದಲ್ಲಿ ವಂಚಿಸಿದ್ದ ಈ ಗ್ಯಾಂಗ್ ಅನ್ನು ಯಶವಂತಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರ ಕಳೆದುಕೊಂಡಿದ್ದ ಗೌರಮ್ಮ ಪೊಲೀಸರಿಗೆ ದೂರು ನೀಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...