alex Certify
ಕನ್ನಡ ದುನಿಯಾ       Mobile App
       

Kannada Duniya

ದಾಖಲೆಯ ಬೆಲೆಗೆ ಹರಾಜಾಯ್ತು ಮುಕ್ತಿ ಬಾವುಟ

nayak

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಶ್ರೀ ತಿಪ್ಪೇರುದ್ರಸ್ವಾಮಿ ರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು. ಇದೇ ಸಂದರ್ಭದಲ್ಲಿ ರಥೋತ್ಸವದ ದೇವರ ಮುಕ್ತಿ ಬಾವುಟವನ್ನು ಹರಾಜು ಹಾಕಿದ್ದು, ದಾಖಲೆಯ 60 ಲಕ್ಷ ರೂ.ಗೆ ಮಾರಾಟವಾಗಿದೆ.

ತಿಪ್ಪೇರುದ್ರಸ್ವಾಮಿ ದೇವರ ಮುಕ್ತಿ ಬಾವುಟವನ್ನು ಪಡೆದವರ ಆರೋಗ್ಯ, ಐಶ್ವರ್ಯ ವೃದ್ಧಿಸುತ್ತದೆ ಎಂಬ ನಂಬಿಕೆ ಇದ್ದು. ಪ್ರತಿವರ್ಷ ರಥೋತ್ಸವದಲ್ಲಿ ಮುಕ್ತಿ ಬಾವುಟವನ್ನು ಹರಾಜು ಮಾಡಲಾಗುತ್ತದೆ. ಕಳೆದ ವರ್ಷ ಹಿರಿಯೂರಿನ ಶಾಸಕ ಡಿ.ಸುಧಾಕರ್ 20 ಲಕ್ಷ ರೂಪಾಯಿಗೆ ಇದನ್ನು ಪಡೆದುಕೊಂಡಿದ್ದರು. 2009ರಲ್ಲಿ ಸಮಾಜ ಸೇವಕ ಶಶಿಶೇಖರನಾಯ್ಕ ಎಂಬುವವರು 27 ಲಕ್ಷ ರೂಪಾಯಿಗೆ ಖರೀದಿಸಿದ್ದರು. ಇದನ್ನು ಪಡೆದರೆ ಒಳಿತಾಗುತ್ತದೆ ಎಂಬ ಕಾರಣದಿಂದ ಶ್ರೀಮಂತರು, ರಾಜಕಾರಣಿಗಳು ಹೆಚ್ಚು ಬೆಲೆ ನೀಡಿ ಪಡೆದುಕೊಳ್ಳುತ್ತಾರೆ.

ಈ ಬಾರಿ ತಿಪ್ಪೇರುದ್ರಸ್ವಾಮಿ ರಥದ ಮುಕ್ತಿ ಬಾವುಟವನ್ನು ಮೈಸೂರಿನ ಉದ್ಯಮಿ ಸೋಮಣ್ಣ ಅವರು. 60 ಲಕ್ಷ ರೂಪಾಯಿ ನೀಡಿ ಖರೀದಿಸಿದ್ದಾರೆ. 1 ಲಕ್ಷ ರೂ. ಆರಂಭಿಕ ಬೆಲೆಯೊಂದಿಗೆ ಹರಾಜು ಪ್ರಕ್ರಿಯೆ ಆರಂಭವಾಗಿ, ತೀವ್ರ ಪೈಪೋಟಿ ನಡೆಯಿತು. ನಂತರ ಸೋಮಣ್ಣ 60 ಲಕ್ಷ ರೂ.ಗೆ ಮುಕ್ತಿ ಬಾವುಟವನ್ನು ತಮ್ಮದಾಗಿಸಿಕೊಂಡರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...