alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಂಡ ಹಾಯುವಾಗ ಬೆಂಕಿ ಹೊಂಡಕ್ಕೆ ಬಿದ್ದ ಭಕ್ತರು

FireWal 56

ಶಿವರಾತ್ರಿ ಪ್ರಯುಕ್ತ ದೇವಾಲಯಗಳಲ್ಲಿ ವಿವಿಧ ಪೂಜೆ, ಅಲಂಕಾರ, ಧಾರ್ಮಿಕ ಕಾರ್ಯ ಏರ್ಪಡಿಸಲಾಗುತ್ತದೆ. ಅದರಲ್ಲಿ ಕೆಂಡ ತುಳಿಯುವುದು ಒಂದಾಗಿದೆ. ಕೆಲವು ದೇವಾಲಯಗಳಲ್ಲಿ ಶಿವರಾತ್ರಿ ಪ್ರಯುಕ್ತ ಕೆಂಡ ತುಳಿಯುವ ಸಂಪ್ರದಾಯವಿದೆ.

ಹೀಗೆ ದೇವರ ಉತ್ಸವದಲ್ಲಿ ಕೆಂಡ ತುಳಿಯಲು ಹೋಗಿ 30 ಕ್ಕೂ ಹೆಚ್ಚು ಮಂದಿ ಬೆಂಕಿ ಹೊಂಡಕ್ಕೆ ಬಿದ್ದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ತುಮಕೂರು ಜಿಲ್ಲೆಯ ಎತ್ತೇನಹಳ್ಳಿ ಎಂಬಲ್ಲಿ ಶಿವರಾತ್ರಿ ಪ್ರಯುಕ್ತ ನಡೆದ ಜಾತ್ರೆಯಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಸಂಪ್ರದಾಯದಂತೆ ಆಯೋಜಿಸಿದ್ದ ಕೆಂಡ ತುಳಿಯುವ ಕಾರ್ಯಕ್ರಮ ನಡೆಯುತ್ತಿತ್ತು. ಕೆಂಡದ ರಾಶಿಯ ಮೇಲೆ ಆಯತಪ್ಪಿ ವ್ಯಕ್ತಿಯೊಬ್ಬರು ಬಿದ್ದಿದ್ದಾರೆ. ಅವರ ಮೈಕೈ ಸುಟ್ಟಿದ್ದು, ಕೆಂಡದಲ್ಲಿ ಬಿದ್ದಿದ್ದ ಅವರನ್ನು ಅಲ್ಲಿದ್ದವರು ರಕ್ಷಿಸಲು ಮುಂದಾಗಿದ್ದಾರೆ.

ಈ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿ ಒಬ್ಬರ ಮೇಲೆ ಒಬ್ಬರು ಬಿದ್ದ ಕಾರಣ ಸುಮಾರು 30ಕ್ಕೂ ಅಧಿಕ ಮಂದಿ ಕೆಂಡದ ಮೇಲೆ ಬಿದ್ದು ಅನಾಹುತ ಉಂಟಾಗಿದೆ. ಕೆಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಗಾಯಾಳುಗಳನ್ನು ತುಮಕೂರು ಹಾಗೂ ಬೆಂಗಳೂರು ಆಸ್ಪತ್ರೆಗೆ ಸೇರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...