alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಬೆಂಗಳೂರಿನಲ್ಲೂ ಸಿಗಲಿದೆ ಮೇಕೆ ಹಾಲು

High speed image of splashing milkಇನ್ನು ಮುಂದೆ ಬೆಂಗಳೂರಿನಲ್ಲಿ ಮೇಕೆ ಹಾಲು ಸಿಗುತ್ತದೆ. ಶುಕ್ರವಾರ ನಗರದ ಲಾಲ್ ಬಾಗ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಶು ಸಂಗೋಪನಾ ಸಚಿವ ಎ. ಮಂಜು ‘ಮೈ ಗೋಟ್’ ಹಾಲನ್ನು ಬಿಡುಗಡೆಗೊಳಿಸಿದರು. ರಾಜ್ಯದ ವಿಧವೆಯರಿಗೆ ಹಾಗೂ ನಿರಾಶ್ರಿತರಿಗಾಗಿ ಅಕ್ಟೋಬರ್ ನಿಂದ ‘ಮೇಕೆ ಭಾಗ್ಯ’ ಯೋಜನೆ ಜಾರಿಗೊಳಿಸಲಾಗುವುದು ಎಂದು ಕೂಡ ಅವರು ಹೇಳಿದರು.

ಮೈಸೂರಿನ ನಂಜನಗೂಡು ತಾಲೂಕಿನ ಯಡೇಹಳ್ಳಿಯ ಯಶೋದವನ ಸಂಸ್ಥೆ ಈ ಹಾಲನ್ನು ಮಾರುಕಟ್ಟೆಗೆ ತಂದಿದೆ. ಈ ಹಾಲು ಪ್ರತಿ ಲೀಟರ್ ಗೆ 250 ರೂ.ಗಳಾಗಿದೆ. ಡೆಂಘೆ ಜ್ವರಕ್ಕೆ ರಾಮಬಾಣವಾಗಿರುವ ಮೇಕೆ ಹಾಲು ದೆಹಲಿಯಲ್ಲಿ ಲೀಟರ್ ಗೆ 2 ರಿಂದ 3 ಸಾವಿರದವರೆಗೆ ಮಾರಾಟಗೊಂಡಿತ್ತು.

ಸೆಪ್ಟೆಂಬರ್ 1 ರಿಂದ ಆನ್ ಲೈನ್ ನಲ್ಲೂ ಮೇಕೆ ಹಾಲು ಸಿಗಲಿದೆ ಎಂದು ಹೇಳಲಾಗಿದೆ. 200 ಎಂಎಲ್ ಹಾಗೂ ಅರ್ಧ ಲೀಟರ್ ಬಾಟಲಿಗಳಲ್ಲಿ ಲಭ್ಯವಿರುವ ಮೇಕೆ ಹಾಲನ್ನು 3 ದಿನಗಳ ಕಾಲ ಫ್ರಿಜ್ ನಲ್ಲಿ ಇಡಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...