alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ಕಾರ್ಡ್ ನೀಡಿತ್ತು ಹಂತಕನ ಸುಳಿವು

monikaಗೋವಾದ ಪಣಜಿಯ ಫ್ಲಾಟ್ ನಲ್ಲಿ ಸುಗಂಧ ದ್ರವ್ಯ ತಜ್ಞೆ ಮೋನಿಕಾ ಘುರ್ಡೆ ಹತ್ಯೆ ನಡೆದು ನಾಲ್ಕು ದಿನಗಳ ನಂತರ ಆರೋಪಿ ಸೆರೆಸಿಕ್ಕಿದ್ದಾನೆ. ಬೆಂಗಳೂರಿನ ಹೋಟೆಲ್ ಒಂದರಲ್ಲಿ ಗೋವಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಪಂಜಾಬ್ ಮೂಲದ 21 ವರ್ಷದ ಯುವಕ ರಾಜ್ ಕುಮಾರ್ ಸಿಂಗ್ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಮೋನಿಕಾ ಈ ಮೊದಲು ವಾಸವಾಗಿದ್ದ ಕಟ್ಟಡದಲ್ಲಿ ಕೆಲಸ ಮಾಡ್ತಾ ಇದ್ದ. ಪಣಜಿಯ ಸಂಗೋಲ್ಡಾ ಬಳಿ ಬಾಡಿಗೆ ಅಪಾರ್ಟ್ ಮೆಂಟ್ ಒಂದ್ರಲ್ಲಿ ಮೋನಿಕಾ ವಾಸವಾಗಿದ್ದಳು. ಅಕ್ಟೋಬರ್ 6 ರಂದು 39 ವರ್ಷದ ಮೋನಿಕಾಳ ಮೃತದೇಹ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಒಂದು ದಿನದ ಹಿಂದೆಯೇ ಆಕೆಯ ಹತ್ಯೆಯಾಗಿದೆ ಅಂತಾ ಪೊಲೀಸರು ತಿಳಿಸಿದ್ದಾರೆ. ಫ್ಯಾಷನ್ ಡಿಸೈನರ್ ಹಾಗೂ ಸುಗಂಧ ದ್ರವ್ಯ ತಜ್ಞೆಯಾಗಿದ್ದ ಮೋನಿಕಾ ಕಳೆದ ಜುಲೈನಿಂದ ಆ ಫ್ಲಾಟ್ ನಲ್ಲಿ ಒಬ್ಬಳೇ ವಾಸಿಸುತ್ತಿದ್ಲು. ಮೋನಿಕಾಳನ್ನು ಹತ್ಯೆ ಮಾಡಿದ ರಾಜ್ ಕುಮಾರ್ ಸಿಂಗ್ ಆಕೆಯ ಮೊಬೈಲ್ ಹಾಗೂ ಎರಡು ಎಟಿಎಂ ಕಾರ್ಡ್ ಗಳನ್ನು ಕದ್ದು ಪರಾರಿಯಾಗಿದ್ದ.

ಕೊಲೆ ನಡೆದ ಸ್ಥಳದಿಂದ ಕೇವಲ 5 ಕಿಮೀ ದೂರದಲ್ಲಿರುವ ಎಟಿಎಂ ಬೂತ್ ನಿಂದ ಹಣ ವಿತ್ ಡ್ರಾ ಮಾಡಿದ್ದ. ಅಲ್ಲಿದ್ದ ಸಿಸಿ ಟಿವಿ ದೃಶ್ಯ ಪರಿಶೀಲಿಸಿದ ಪೊಲೀಸರು ಹಂತಕನ ಜಾಡು ಹಿಡಿದು ಬೆಂಗಳೂರಿಗೆ ಬಂದಿದ್ದರು. ಆರೋಪಿ ರಾಜ್ ಕುಮಾರ್ ಈಗಾಗ್ಲೇ ಮೋನಿಕಾಳ ಎಟಿಎಂ ಕಾರ್ಡ್ ಬಳಸಿ 1 ಲಕ್ಷ ರೂಪಾಯಿ ಡ್ರಾ ಮಾಡಿದ್ದಾನೆ. ಕೇವಲ ಹಣಕ್ಕಾಗಿ ಈ ಹತ್ಯೆ ನಡೆದಿದ್ಯಾ ಅನ್ನೋದನ್ನು ಪೊಲೀಸರು ತನಿಖೆ ಮಾಡ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...