alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾಹ ನಿಶ್ಚಯವಾಗಿದ್ದ ಯುವತಿಯ ನಿಗೂಢ ಸಾವು

un natural deathದಕ್ಷಿಣ ಕನ್ನಡ ಜಿಲ್ಲೆ ಉಜಿರೆಯ ವಿನಾಯಕ ನಗರದ ನಿವಾಸಿ 21 ವರ್ಷದ ವಿನುತಾ ಎಂಬ ಯುವತಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಈಕೆ ಕಳೆದ 7 ವರ್ಷಗಳಿಂದ ಪ್ರತಾಪ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದು, ಇಬ್ಬರ ಮದುವೆ ಕೂಡ ನಿಶ್ಚಯವಾಗಿತ್ತು. ಮಹಿಳೆಯೊಬ್ಬರು ತಂದು ಕೊಟ್ಟ ಮಾತ್ರೆಯೇ ಯುವತಿ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ. ಈ ಮಾತ್ರೆ ಸೇವಿಸಿದ್ದ ಪರಿಣಾಮ ಯುವತಿಗೆ ಸತತವಾಗಿ 3 ದಿನಗಳ ಕಾಲ ವಾಂತಿಯಾಗಿ ಬಳಿಕ ಆಕೆ ಮೃತಪಟ್ಟಿದ್ದಾಳೆ.

ದೂರು ದಾಖಲು ಮಾಡಿಕೊಂಡಿದ್ದ ಬೆಳ್ತಂಗಡಿ ಠಾಣೆ ಪೊಲೀಸರು, ಈ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆಗೆ ನಡೆಸಿದಾಗ ಆಕೆ, ಮಧುಮಗ ಪ್ರತಾಪ್ ನೇ ಮಾತ್ರೆ ಕಳುಹಿಸಿಕೊಟ್ಟಿದ್ದನೆಂಬ ಮಾಹಿತಿ ನೀಡಿದ್ದಾಳೆನ್ನಲಾಗಿದೆ.

ಆದರೆ ಪ್ರೀತಿಸಿದ್ದ ಯುವತಿಯನ್ನು ಮದುವೆಯಾಗುತ್ತಿದ್ದ ಪ್ರತಾಪ್, ಏಕೆ ಹೀಗೆ ಮಾಡಿದ್ದಾನೆ ಅಥವಾ ಆ ಮಹಿಳೆ ಯುವಕನ ಹೆಸರನ್ನು ಹೇಳುವ ಮೂಲಕ ತಾನು ಪಾರಾಗಲು ಯತ್ನಿಸುತ್ತಿದ್ದಾಳೆಯೇ ಎಂಬ ಸಂಗತಿ ಮತ್ತಷ್ಟು ವಿಚಾರಣೆಯಲ್ಲಿ ಬಯಲಾಗಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...